ಪಬ್ಲಿಕ್ ನೆಕ್ಸ್ಟ್ ವಿಶೇಷ
ಈರಣ್ಣ ವಾಲಿಕಾರ
ಹುಬ್ಬಳ್ಳಿ: ಮದುಮಗಳಿಗೆ ವಿಶೇಷ ಅಲಂಕಾರ ಮಾಡುವುದು ಕಾಮನ್. ಆದ್ರೆ ಅದೇ ಅಂದವಾಗಿ ಸುಂದರವಾಗಿ ಕಾಣಿಸುವ ಮೇಕಪ್ ಮಾಡುವ ಸ್ಪರ್ಧೆಯಲ್ಲಿ ಹುಬ್ಬಳ್ಳಿ ಮಹಿಳೆಯೊಬ್ಬರು ಗಿನ್ನಿಸ್ ದಾಖಲೆ ಮಾಡುವ ಮೂಲಕ ಹುಬ್ಬಳ್ಳಿ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಹೀಗೆ ಮುಖಕ್ಕೆ ಅಂದವಾಗಿ ಮೇಕಪ್ ಮಾಡುತ್ತಿರುವ ಇವರ ಹೆಸರು ಶೈಲಜಾ ಶ್ರೀರಾಮ ಬಗಾಡೆ. ಹುಬ್ಬಳ್ಳಿಯ ಅಕ್ಷಯ ಕಾಲೋನಿ ನಿವಾಸಿಯಾದ ಇವರು ಮದುವೆ ಸಮಾರಂಭಗಳಲ್ಲಿ ಮದುಮಗಳಿಗೆ ಮೇಕಪ್ ಮಾಡುವದರಲ್ಲಿ ಸಿದ್ದಹಸ್ತರು. ಇವರ ಈ ಪ್ರಾವಿಣ್ಯತೆ ಇಂದು ಗಿನ್ನಿಸ್ ರೆಕಾರ್ಡ್ ಗುರಿ ಮುಟ್ಟಯವಂತೆ ಮಾಡಿದೆ.
ಬ್ರಾಹ್ಮಣಿ ಇವೆಂಟ್ಸ್ ಆ್ಯಂಡ್ ಎಕ್ಸಿಬಿಷನ್, ಬೀಸಾ ಇಂಟರ್ ನ್ಯಾಶನಲ್ ಬ್ಯೂಟಿ ಸಲ್ಯೂಸನ್, ಆಲ್ ಇಂಡಿಯನ್ ಹೇರ್ ಆ್ಯಂಡ್ ಬ್ಯೂಟಿ ಅಸೋಸಿಯೆಸನ್ ಸಹ ಭಾಗಿತ್ವದಲ್ಲಿ 45 ನಿಮಿಷದಲ್ಲಿ ಮದುವೆಗಳಿಗೆ ವಿಶೇಷ ಅಲಂಕಾರ ಮಾಡುವ ಆನ್‌ಲೈನ್ ಸ್ಪರ್ಧೆಯನ್ನು 2020 ರ ಡಿಸೆಂಬರ್ 20 ರಂದು ಆಯೋಜಿಸಲಾಗಿತ್ತು . ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಇವರು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ಗೆ ದಾಖಲೆ ಮಾಡುವ ಮೂಲಕ ಹುಬ್ಬಳ್ಳಿಯ ಹಿರಿಮೆ, ಗರಿಮೆ ಹೆಚ್ಚಿಸಿದ್ದಾರೆ. ದೇಶಾದ್ಯಂತ 1146 ಸ್ಪರ್ಧಾಳುಗಳಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿತ್ತು. ಈ ಪೈಕಿ ಹುಬ್ಬಳ್ಳಿಯಿಂದ ಶೈಲಜಾ ಅವರಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿತ್ತು. ಸ್ಪರ್ಧೆಯಲ್ಲಿ ಯಶಸ್ವಿಯಾಗಿ ಭಾಗಿಯಾಗಿದ್ದಕ್ಕೆ ನಿಗದಿತ ಸಮಯಕ್ಕಿಂತ ಕಡಿಮೆ ಸಮಯದಲ್ಲಿ ಮೇಕಪ್ ಪೂರೈಸಿದಕ್ಕೆ ಶೈಲಜಾ ಅವರಿಗೆ ಪ್ರಶಂಸೆ ಪತ್ರ ನೀಡಿ ಗೌರವಿಸಲಾಗಿದೆ.
ಶೈಲಜಾ ಅವರು ಮೂಲತಃ ರಾಣೆಬೆನ್ನೂರಿನವರಾಗಿದ್ದು, ಹುಬ್ಬಳ್ಳಿಯಲ್ಲಿ 26 ವರ್ಷಗಳಿಂದ ಬ್ಯೂಟಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಅಕ್ಷಯ ಎನ್‌ಕ್ಲಬ್‌ನಲ್ಲಿ ಶೈಲಾ ಬ್ಯೂಟಿಕೇರ್ ನಡೆಸುತ್ತಿದ್ದಾರೆ. ಫೇಸ್ ಕೊಂಟರಿಂಗ್, ಐಲ್ಯಾತ್, ಹೈಲೈಟ್ಸ್‌ನಂತಹ ಕಠಿಣ ಸವಾಲಿನ ಮೇಕಪ್ ಮಾಡುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದಕ್ಕೆ
ಅವರ ಸ್ನೇಹಿತರು ಹಾಗೂ ಹಿತೈಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಮೇಕಪ್ ಮಾಡುವ ಕಲೆಯಲ್ಲೂ ಹುಬ್ಬಳ್ಳಿ ಮಹಿಳೆ ಗಿನ್ನೆಸ್ ದಾಖಲೆ ಮಾಡುವ ಮೂಲಕ ಹುಬ್ಬಳ್ಳಿ ಕೀರ್ತಿಯನ್ನು ಹೆಚ್ಚಿಸಿದ್ದು, ಇವರು ಇನ್ನಷ್ಟು ಸಾಧನೆ ಮಾಡಲಿ ಎನ್ನುವುದು ನಮ್ಮ ಆಶಯ....!
Kshetra Samachara
06/02/2021 01:59 pm