ಕಲಘಟಗಿ:ತಾಲೂಕಿನ ದಾಸ್ತಿಕೊಪ್ಪ ಸರಕಾರಿ ಆದರ್ಶ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪಟ್ಟಣದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿದ್ಯಾಗಮ ಯೋಜನೆಯ ವಿಜ್ಞಾನ ಉತ್ಸವ ಆಚರಿಸಿದರು.
ವಿದ್ಯಾರ್ಥಿಗಳು ವಿವಿಧ ಬಗೆಯ ವಿಜ್ಞಾನ ಪ್ರಯೋಗಗಳನ್ನು ಹಾಗೂ ಮಾದರಿಗಳನ್ನು ತಯಾರಿಸಿ ಶಿಕ್ಷಕರಿಗೆ ವಿವರಿಸಿದರು.ವಿಜ್ಞಾನ ಉತ್ಸವ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಸಲುವಾಗಿ ವಿಜ್ಞಾನ ಉತ್ಸವ ಸಹಕಾರಿಯಾಯಿತು.
ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಉತ್ಸವದ ನಂತರ ವಿದ್ಯಾರ್ಥಿಗಳಿಗೆ ಚಾಕಲೇಟ್ ವಿತರಿಸಲಾಯಿತು. ಶಿಕ್ಷಕರಾದ ಲೀನಾ ಆಲೂರ ಹಾಗೂ ನೀತಾ ಶಿಂಘೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
Kshetra Samachara
24/09/2020 03:00 pm