ಕಲಘಟಗಿ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿ ಆಂದೋಲನದ ಅಂಗವಾಗಿ ರೈತರ ಸಭೆ ಹಾಗೂ ಜನಜಾಗೃತಿ ಜಾಥಾ ನಡೆಸಲಾಯಿತು.
ಕರ್ನಾಟಕ ಭೂಸುಧಾರಣಾ ಕಾಯದೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ‘ನಮ್ಮೂರ ಭೂಮಿ ನಮಗಿರಲಿ, ಅನ್ಯರಿಗಲ್ಲ’ ಎಂಬ ಘೋಷಣೆಯಡಿ, ಸಂಘಟಕರಾದ ಕುಮಾರ ಸಂತಾಲ ಹಾಗೂ ಕಂದಗಲ್ ಶ್ರೀನಿವಾಸ ಮಾತನಾಡಿ,ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತ ,ದಲಿತ, ಕಾರ್ಮಿಕ ವಿರೋಧಿ ಸುಗ್ರಿವಾಜ್ಞೆಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ನಿಂಗಮ್ಮ ಸವಣೂರು, ಶಿವರಾಜ ಐಸ್ಯಾಕ್ಸ್ ಹಾಗೂ ರೈತರು,ಭೂ ಕಾರ್ಮಿಕರು ಉಪಸ್ಥಿತರಿದ್ದರು.
Kshetra Samachara
20/09/2020 02:54 pm