ಪಬ್ಲಿಕ್ ನೆಕ್ಸ್ಟ್ ವಿಶೇಷ: ಮಲ್ಲಿಕಾರ್ಜುನ ಪುರದನಗೌಡರ
ಕಲಘಟಗಿ:ಕರೋನಾ,ಕರೋನಾ,ಕರೋನಾ..........ಎಲ್ಲಿ ಕೇಳಿದರು ಇದರದೇ ಸದ್ದು,ಪರಿಣಾಮ ಲಾಕ್ ಡೌನ್ ಇದರ ಹೊಡೆತಕ್ಕೆ ಸಿಕ್ಕ ದೂರದ ಉತ್ತರ ಪ್ರದೇಶದ ಅಮ್ಯೂಜಮೆಂಟ್ ಪಾರ್ಕ್ ನ ಕೆಲಸಗಾರರು ಹಾಗೂ ಜಾದುಗಾರ ಕಲಾವಿದರು ಕಲಘಟಗಿ ಜಾತ್ರೆಗೆ ಬಂದು ಉದ್ಯೋಗ ಇಲ್ಲದೇ ಅಂತಂತ್ರರಾಗಿದ್ದಾರೆ.
ಹೌದು,ಮಾರ್ಚ ತಿಂಗಳಲ್ಲಿ ಜರುಗಿದ ಉತ್ತರ ಕರ್ನಾಟಕದ ದೊಡ್ಡ
ಜಾತ್ರೆಗಳಲ್ಲಿ ಒಂದಾದ ಕಲಘಟಗಿ ಶ್ರೀ ಗ್ರಾಮದೇವಿ ಜಾತ್ರೆಗೆ ಆಗಮಿಸಿದ್ದ ಅಮ್ಯೂಜಮೆಂಟ್ ಪಾರ್ಕ್ ನ ಕೆಲಸಗಾರರು ಹಾಗೂ ಜಾದುಗಾರ ಕಲಾವಿದರು ಲಾಕ್ ಡೌನ್ ಕಾರಣ ಕಲಘಟಗಿಯಲ್ಲಿಯೇ ಲಾಕ್ ಆಗಿದ್ದು,ಉದ್ಯೋಗ ಇಲ್ಲದೇ ಜೀವನ ಕಷ್ಟವಾಗಿದೆ.
ಕೇಂದ್ರ ಸರಕಾರ ಲಾಕ್ ಡೌನ್ ಘೋಷಣೆ ಮಾಡಿದ ಪರಿಣಾಮ ಅಮ್ಯೂಜಮೆಂಟ್ ಕೆಲಸಗಾರರು,ಕಲಾವಿದರು ತಮ್ಮ ಕುಟುಂಬಗಳೊಂದಿಗೆ ಸುಮಾರು ಮೂವತ್ತು ಜನರು ಕಲಘಟಗಿಯಲ್ಲಿ ಯೇ ಗುಡಿಸಲು ಹಾಕಿ ಉಳಿಯ ಬೇಕಾಗಿದ್ದು,ಕಳೆದ ಆರು ತಿಂಗಳಿಂದ ಜಾತ್ರೆಗಳು ನಡೆಯದೇ,ಪ್ರದರ್ಶನಗಳು ಇಲ್ಲದೇ,ಬೇರೆ ಉದ್ಯೋಗ ಸಿಗದೇ ಜೀವನ ಕಷ್ಟವಾಗಿದೆ.
ಲಾಕ್ ಡೌನ್ ನಿಂದ ಜೀವನ ಕಷ್ಟವಾಗಿದ್ದು,ಸಾಮಗ್ರಿಗಳನ್ನು ಸಾಗಿಸಲು ಆಗದೇ ಉಳಿದಿದ್ದೆವೆ,ಸರಕಾರ ಸಹಾಯ ಮಾಡ ಬೇಕು ಎಂದು ಜಾದುಗಾರ ಕಲಾವಿದರಾದ ಮಹ್ಮದ ಹುಸೇನ ಪಬ್ಲಿಕ್ ನೆಕ್ಸ್ಟ್ ಗೆ ಅಳಲು ಹೇಳಿಕೊಂಡರು.
ಉತ್ತರ ಪ್ರದೇಶದಿಂದ ಅಮ್ಯೂಜಮೆಂಟ್ ತರಸಿ ನಷ್ಟ ಅನುಭವಿಸಿರುವ ರಾಜು ಅಣ್ಣಿಗೇರಿ,ಅಮ್ಯೂಜಮೆಂಟ್ ಕೆಲಸಗಾರರಿಗೆ ಆಹಾರ ಸಾಮಗ್ರಿಗಳನ್ನು ಇಲ್ಲಿಯವರೆಗೆ ನೀಡಿ ಸಹಾಯ ಮಾಡಿದ್ದಾರೆ.
ಆರು ತಿಂಗಳುಗಳಿಂದ ಜಾತ್ರೆಗಳು ನಡೆಯದೇ ಇಂತಹ ಉದ್ಯೋಗ ಅವಲಂಬಿತರು ಸಂಕಷ್ಟಕ್ಖೆ ಸಿಲುಕಿದ್ದಾರೆ.ಸರಕಾರ ಪ್ಯಾಕೇಜ್ ನೀಡ ಬೇಕಿದೆ ಹಾಗೂ ಇವರ ಸಂಕಷ್ಟಕ್ಕೆ ಸರಕಾರೇತ ಸಂಸ್ಥೆಗಳು ಸ್ಪಂದಿಸ ಬೇಕಿದೆ.
Kshetra Samachara
24/09/2020 10:08 pm