ಧಾರವಾಡ: ಭಾರತ ಹಾಗೂ ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ಈ ಮಧ್ಯೆ ಭಾರತ ಹಾಗೂ ಚೀನಾ ಗಡಿಯಲ್ಲಿ ನಿಂತು ಧಾರವಾಡ ತಾಲೂಕಿನ ಬೆನಕಟ್ಟಿ ಗ್ರಾಮದ ಯೋಧನೊಬ್ಬ ಘರ್ಜಿಸಿರುವ ವೀಡಿಯೋ ಇದೀಗ ಸಖತ್ ವೈರಲ್ ಆಗಿದೆ.
'ಚೀನಾ ಗಡಿಗೆ ಬಂದು 8 ದಿನಾ ಆತು.. ಚೀನಾ ಗಡ್ಯಾಗ ನಿಂತ ಜೀವನಾ ಮಾಡಾಕತ್ತೇವಿ.. ಯುದ್ಧಕಂತ ಬಂದೇವಿ.. ಏನು ಆಗುತ್ತೋ ನೋಡುಣ.. ಬೆನಕಪ್ಪಜ್ಜ ಎಲ್ಲಿಗೆ ಹಚ್ಚತಾನೋ ನೋಡುಣ.. ಅಲ್ಲಿರೋದ ಚೀನಾ ಗಡಿ.. ಇಲ್ಲಿರೋದ ಬೆನಕಟ್ಟಿ ಹುಲಿ.. ಎಂದು ಬೆನಕಟ್ಟಿ ಗ್ರಾಮದ ಯೋಧ ಈರಯ್ಯ ಹಿರೇಮಠ ತಮ್ಮ ಸ್ನೇಹಿತರಿಗೆ ಕಳುಹಿಸಿರುವ ವೀಡಿಯೋ ಇದೀಗ ವೈರಲ್ ಆಗಿದೆ.
Kshetra Samachara
08/10/2020 01:02 pm