ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಈ ಕಲಾವಿದರ ಗೋಳು ಕೇಳುವವರು ಯಾರು?

ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ

ಹುಬ್ಬಳ್ಳಿ- ಜಾನಪದ, ಸಂಸ್ಕೃತಿಯಂತಹ ಕಲೆಗಳು ಅನಕ್ಷರಸ್ಥರು ಮತ್ತು ಮುಗ್ದ ಜನರ ಕಲೆಗಳಾಗಿವೆ. ಆದರೆ ಕೊರೊನಾ ಪರಿಣಾಮದಿಂದಾಗಿ ಇವರ ಬದುಕು ಈಗ ಅಂಗಲಾಚುವಂತಾಗಿದೆ.

ವಾಯ್ಸ್ ಓ- ಹೌದು, ಕಲೆ ಸಂಸ್ಕೃತಿ ಕ್ಷೇತ್ರಗಳತ್ತ ಸರ್ಕಾರ ಗಮನ ಹರಿಸಿ, ಆದಷ್ಟು ಬೇಗ ಎಲ್ಲ ಸಂಸ್ಕೃತಿಕ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರೆ, ನಮ್ಮ ಜೀವನದ ಚಕ್ಕಡಿಯನ್ನು ಸಾಗಿಸಲು ತುಂಬಾ ಅನುಕೂಲವಾಗುತ್ತದೆ ಎಂದು ಈ ಬಡ ಕಲಾವಿದರು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಸುಮಾರು 40 ವರ್ಷಗಳಿಂದ ಈ ಕಲೆಯಲ್ಲಿಯೇ ಬದುಕು ಕಟ್ಟಿಕೊಂಡ ಕೊಟೇಶ ಹುಲ್ಲಿ ತಂಡಕ್ಕೆ ಸಧ್ಯ 8 ತಿಂಗಳಿಂದ ಯಾವ ಕಾರ್ಯಕ್ರಮ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ......

ಇವರು ಸುಮಾರು 15 ಜನ ಸೇರಿಕೊಂಡು ಶ್ರೀ ಚಾಮುಂಡೇಶ್ವರಿ ದಾಲಪಟಾ ತಂಡ ಎಂದು ಕಟ್ಟಿಕೊಂಡು,

ಧಾಳಪಟ ಕಲೆ, ಸಂಬಾಳ ವಾದ್ಯ, ಗೊಂಬೆ ಕುಣಿತ, ಕಾಳಿ ವಾದ್ಯ, ಸಮರ ಕಲೆ, ಹೀಗೆ ಹಲವಾರು ಕಲೆಗಳನ್ನು ಸಾಹಿತ್ಯ ಸಮ್ಮೇಳನ, ಧಾರವಾಡ ಉತ್ಸವ, ಹಂಪಿ ಉತ್ಸವ, ಜಾತ್ರೆಗಳಲ್ಲಿ ಪ್ರದರ್ಶನ ಮಾಡುತ್ತಿದ್ದರು. ಇವರಿಗೆ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಅಧಿಕಾರಿಗಳು ಮೊದಲಿಗೆ ಕಾರ್ಯಕ್ರಮಕ್ಕೆ ಆಮಂತ್ರಣ ನೀಡುತ್ತಿದ್ದರು. ಈಗ ಸರ್ಕಾರದ ನಿಯಮದ ಅಂಗವಾಗಿ ಯಾವುದೇ ಸಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಮತಿ ಇಲ್ಲದ ಕಾರಣ, ಕಲೆಯನ್ನೆ ನಂಬಿದ ಈ ಬಡ ಕಲಾವಿದರಿಗೆ ದಾರಿ ತೊರಬೇಕು ಎಂದು ತಮ್ಮ ಅಳಲನ್ನು ತೊಡಿಕೊಂಡರು........!

Edited By : Nagesh Gaonkar
Kshetra Samachara

Kshetra Samachara

22/09/2020 05:57 pm

Cinque Terre

49.11 K

Cinque Terre

3

ಸಂಬಂಧಿತ ಸುದ್ದಿ