ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಸ್ತೆ ದಾಟಲು ಅಂಗವಿಕಲನಿಗೆ ಅನುವು ಮಾಡಿಕೊಟ್ಟು ಮಾನವೀಯತೆ ಮೆರೆದ ಚಿಗರಿ‌ ಬಸ್ ಚಾಲಕ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ರಸ್ತೆಗಳು ನಿತ್ಯ ವಾಹನ ದಟ್ಟಣೆಯಿಂದ ಗಿಜಗುಡುತ್ತವೆ. ಅದರಲ್ಲೂ ಗದಗ-ಹುಬ್ಬಳ್ಳಿ ಸಂಪರ್ಕಿಸುವ ರಸ್ತೆಯಲ್ಲಿ ಸಾಮಾನ್ಯ ಜನರು ರಸ್ತೆ ದಾಟಲು ಪರದಾಡುತ್ತಾರೆ‌.

ಅಂತರದಲ್ಲಿ ಚಿಟಗುಪ್ಪಿ ಆಸ್ಪತ್ರೆ ಎದುರು ಅಂಗವಿಕಲನೊಬ್ಬ ತೆವಳಿಕೊಂಡು ರಸ್ತೆದಾಟುವದನ್ನು ಗಮನಿಸಿದ ಬಿ ಆರ್ ಟಿ ಎಸ್ ಚಿಗರಿ ಬಸ್ ಚಾಲಕ ಬಸ್ ನಿಲ್ಲಿಸಿದ್ದಾನೆ. ಅಂಗವಿಕಲ‌ ವ್ಯಕ್ತಿ ರಸ್ತೆ ದಾಟಿದ ಮೇಲೆಯೇ ಬಸ್ ಮುಂದೆ ತಗೆದುಕೊಂಡು ಹೋಗಿದ್ದಾನೆ.

ಈ ದೃಶ್ಯವನ್ನು ರಾಜು ದಖನಿ ಎಂಬುವವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಚಾಲಕನ ಮಾನವೀಯತೆ ಹಾಗೂ ತಾಳ್ಮೆಗೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Edited By : Nagesh Gaonkar
Kshetra Samachara

Kshetra Samachara

28/09/2020 07:29 pm

Cinque Terre

33.39 K

Cinque Terre

21

ಸಂಬಂಧಿತ ಸುದ್ದಿ