ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾರು ಚಾಲಕನಿಗೆ ದೊಡ್ಡ ಗಿಫ್ಟ್ ಕೊಟ್ಟ ಪಾಪು

ವರದಿ : ಈರಣ್ಣ ವಾಲಿಕಾರ

ಹುಬ್ಬಳ್ಳಿ- ಅವರು ಕನ್ನಡ ಪರ ಹೋರಾಟಕ್ಕೆ ನಾಂದಿ ಹಾಡಿದ ದಿಗ್ಗಜ. ಸದಾ ಚಳುವಳಿ, ಪ್ರತಿಭಟನೆ, ದಿಟ್ಟ ಹೋರಾಟಗಳಿಂದ ಸುದ್ದಿಯಲ್ಲಿದ್ದ ಮೇರುವ್ಯಕ್ತಿತ್ವ ಅವರದ್ದು. ತನ್ನನ್ನು ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲ ಎನ್ನುವುದಕ್ಕೆ ಇದೇ ದೊಡ್ಡ ಸಾಕ್ಷಿ.....

ಹೌದು, ಕನ್ನಡಪರ ಹೋರಾಟಗಳಿಂದ ಕರುನಾಡಿನ ಕೀರ್ತಿ ಹೆಚ್ಚಿಸಿದ್ದ ಮೇರುವ್ಯಕ್ತಿ ನಾಡೋಜ ಪಾಟೀಲ ಪುಟ್ಟಪ್ಪ. ಅವರು ನಮ್ಮೆಲ್ಲರನ್ನು ಅಗಲಿ ಆರು ತಿಂಗಳು ಕಳೆಯುತ್ತಾ ಬಂದಿದೆ. ಅವರು ವಿಧಿವಶರಾಗುವ ಮೊದಲು ಬರೆದ ವಿಲ್ ದಲ್ಲಿ ತಮ್ಮ ಕಾರು ಚಾಲಕನಾದ ಸಯ್ಯದ್ ಅವರಿಗೆ ಉಡುಗೋರಡ ಕೊಡುವುದರ ಮೂಲಕ ಮಾದರಿಯಾಗಿದ್ದಾರೆ. ಎಸ್,,, ತಾವು ಪ್ರಯಾಣ ಮಾಡುತ್ತಿದ್ದ ಮಾರುತಿ ಸುಝೂಕಿ ಕಂಪನಿಯ ಬ್ರೆಜ್ಜಾ ಎಸ್ ಯುವಿ ಕಾರ್ ನ್ನು ಉಡುಗೊರೆಯಾಗಿ ಕೊಡಲು ಉಲ್ಲೇಖಸಿರುವುದು ಚಾಲಕನಲ್ಲಿ ಸಂತಸ ಮೂಡಿದ್ದು, ಕಾರು ಕೊಟ್ಟರೆ ಚಲಾಯಸಿಕೊಂಡು ಹೇಗೋ ಬದುಕು ಸಾಗಿಸುವ ಆಲೋಚನೆ ಹೊಂದಿದ್ದಾರೆ....

ಸಯ್ಯದ್, ಸುಮಾರು 25 ವರ್ಷಗಳಿಂದ ಪಾಪು ಅವರ ಕಾರು ಚಲಾಯಿಸುತ್ತಿದ್ದರು, ಚಾಲಕ ಅಷ್ಟೇ ಅಲ್ಲದೆ, ಪಾಪು ಅವರ ದಿನನಿತ್ಯದ ಕೆಲಸವನ್ನು ಸಹ ಮಾಡುತ್ತಿದರು. ಬೆಳಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವ ವರೆಗೂ ಸಯ್ಯದ್ ಪಾಪು ಅವರ ಜೊತೆ ಇದ್ದು ಎಲ್ಲ ಕಾರ್ಯ ಮಾಡುತ್ತಿದ್ದರು. ಇನ್ನು ಪ್ರತಿಯೊಂದು ಕಾರ್ಯಕ್ರಮಕ್ಕೆ ಸಯ್ಯದ್ ಇರಲೇಬೇಕು ಎನ್ನುವ ಮನೋಭಾವ ಪಾಪು. ಒಟ್ಟಿನಲ್ಲಿ ಪಾಪು ಅವರು, ವಿಧಿವಶರಾದರು ಕೂಡಾ ನಂಬಿದವರನ್ನು ಎಂದಿಗೂ ಬೀಡಲ್ಲ ಎಂಬುವುದಕ್ಕೆ ಇದು ದೊಡ್ಡ ಸಾಕ್ಷಿಯಾಗಿದೆ........!

Edited By : Nagesh Gaonkar
Kshetra Samachara

Kshetra Samachara

29/09/2020 05:21 pm

Cinque Terre

37.17 K

Cinque Terre

5

ಸಂಬಂಧಿತ ಸುದ್ದಿ