ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಮಗ ಮೃತಪಟ್ಟರೂ ಮತ್ತೂಬ್ಬರ ಬಾಳಿಗೆ ಬೆಳಕಾದ

ಪಬ್ಲಿಕ್ ನೆಕ್ಸ್ಟ್ ವಿಶೇಷ-ಈರಣ್ಣ ವಾಲಿಕಾರ

ಹುಬ್ಬಳ್ಳಿ- ಎಲ್ಲ ದಾನಕ್ಕಿಂತ ಶ್ರೇಷ್ಠ ದಾನ ನೇತ್ರದಾನ, ಇದನ್ನರಿತು ಇಲ್ಲೊಂದು ಕುಟುಂಬ ಹೃದಯಘಾತದಲ್ಲಿ ತಿರಿಹೋದ, ತನ್ನ ಮಗನ ಕಣ್ಣುಗಳನ್ನು ದಾನ ಮಾಡುವುದರ ಮೂಲಕ, ಇನ್ನೆರಡು ಜೀವಗಳು ಪ್ರಪಂಚವನ್ನು ನೋಡುವ ಭಾಗ್ಯ ನೀಡಿದ್ದು ಮಾನವೀಯತೆ ಸಾಕ್ಷಿಯಾಗಿದ್ದಾರೆ.....

ಹೀಗೆ ತನ್ನ ಮಗನ ಪೋಟೋವನ್ನು ಹಿಡಿದುಕೊಂಡು ಕುಳುತಿರುವವರು ಮಾರುತಿ ಬಳ್ಳಾರಿ ದಂಪತಿ, ಇವರ ಮಗ ಗೌತಮ, ಹುಟ್ಟುತ್ತಲೇ ವಿಶೇಷಚೇತನವಾಗಿದ್ದ, 9 ವರ್ಷ ಬಳಿಕ ಅಕಾಲಿಕವಾಗಿ ಹೃದಯಾಘಾತವಾಗಿ ಮರಣ ಹೊಂದಿದ ನಂತರ, ಇಂಥ ಸಂಕಷ್ಟಮಯ ಸನ್ನಿವೇಶದಲ್ಲೂ, ಹೆತ್ತವರು ತಮ್ಮ ಆತ್ಮಸ್ಥೈರ್ಯ ಕಳೆದುಕೊಳ್ಳದೆ, ಮಗನ ಕಣ್ಣುಗಳನ್ನು ಕಾರ್ನಿಯಾ ಅಂಧವುಳ್ಳವರಿಗೆ ದಾನ ಮಾಡಿ ಮಾದರಿ ಯಾಗಿದ್ದಾರೆ....

ಮಗನ ಸಾವಿನ ದುಃಖದ ಮಡುವಿನಲ್ಲೂ ಪಾಲಕರು ಧೃತಿಗೆಡದೆ ಇಂಥ ನಿರ್ಧಾರ ಕೈಗೊಂಡಿದ್ದಾರೆ. ಇದು ನಮಗೆ ಸಂಕಷ್ಟದ ಜೊತೆಗೆ ಇನ್ನೊಬ್ಬರಿಗೆ ಪ್ರಪಂಚ ನೋಡುವ ಭಾಗ್ಯ ತಂದಿದ್ದು, ಸಂತಸ ತಂದಿದೆ ಎಂದು ಸಂಬಂಧಿಕರ ಮಾತಾಗಿದೆ...

ಈಗ ಕಣ್ಣು ದಾನ ಮಾಡಿದವರ ಬಾಳಿನಲ್ಲಿ ಬೆಳಕು ಮೂಡಿದೆ. ಯಾರು ಅಂಧರಿದ್ದರು ಅವರು ಈಗ ಗೌತಮ ಹೃದಯವಿ ಶಾಲತೆಯಿಂದ ಇನ್ನೊಬ್ಬರ ಬಾಳಿಕೆ ಬೆಳಕು ನೀಡಿದಂತಾಗಿದೆ......!

Edited By :
Kshetra Samachara

Kshetra Samachara

18/09/2020 06:39 pm

Cinque Terre

57.04 K

Cinque Terre

24

ಸಂಬಂಧಿತ ಸುದ್ದಿ