ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕೊಳಚೆ ನೀರೇ ಕುಡಿಯುತ್ತಿದ್ದಾರಾ ಯಮನೂರಿಗೆ ಬಂದ ಭಕ್ತರು?

ನವಲಗುಂದ : ಸುಕ್ಷೇತ್ರ ಎಂದೇ ಹೆಸರುವಾಸಿಯಾದ ಯಮನೂರ ಚಾಂಗದೇವನ ದರ್ಶನಕ್ಕೆ ಕಳೆದ ಒಂದು ತಿಂಗಳಿಂದ ಭಕ್ತರು ಬರುತ್ತಾನೆ ಇದ್ದಾರೆ. ಆದರೆ ಅವರು ಕುಡಿಯುತ್ತಿರುವ ನೀರು ಶುದ್ಧವಾಗಿದೆಯಾ? ಇಲ್ವಾ? ಗ್ರಾಮಸ್ಥರ ಆರೋಪ ಏನು ಎಂಬುದು ನಾವು ಹೇಳ್ತಿವಿ ಬನ್ನಿ

YES... ಜಾತ್ರೆ ಆರಂಭದಿಂದ ಇದುವರೆಗೂ ಯಮನೂರ ಚಾಂಗದೇವನ ದರ್ಶನಕ್ಕೆ ಲಕ್ಷಾಂತರ ಭಕ್ತರು ಬಂದಿದ್ದಾರೆ. ಅವರಿಗಾಗಿ ಯಮನೂರ ಗ್ರಾಮ ಪಂಚಾಯತ್ ವತಿಯಿಂದ ವ್ಯವಸ್ಥಿತ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ಆದರೆ ಈ ನೀರು ಕುಡಿಯಲು ಯೋಗ್ಯವಿದೆಯಾ ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಅಷ್ಟಕ್ಕೂ ಗ್ರಾಮಸ್ಥರ ಆರೋಪ ಏನು ಎಂಬುದನ್ನು ನೀವೇ ಕೇಳಿ.

ಯಮನೂರ ಗ್ರಾಮಕ್ಕೆ ಬಂದಂತ ಭಕ್ತರಿಂದ ಗ್ರಾಮದಲ್ಲಿ ಅಸ್ವಚ್ಛತೆ ಹೆಚ್ಚುತ್ತಿದೆ ಎಂಬ ಆರೋಪ ಕೂಡ ಗ್ರಾಮಸ್ಥರಲ್ಲಿ ದಟ್ಟವಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ, ಗ್ರಾಮದ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಬಗ್ಗೆ ಕಾಳಜಿ ವಹಿಸಬೇಕಿದೆ ಎಂಬ ಆಗ್ರಹ ಗ್ರಾಮಸ್ಥರದ್ದಾಗಿದೆ.

Edited By :
Kshetra Samachara

Kshetra Samachara

19/04/2022 01:38 pm

Cinque Terre

25.32 K

Cinque Terre

1

ಸಂಬಂಧಿತ ಸುದ್ದಿ