ಹುಬ್ಬಳ್ಳಿ: ಆ ರಸ್ತೆಯಲ್ಲಿ ಪೊಲೀಸರು, ರಾಜಕಾರಣಿಗಳು ಓಡಾಡಬಹುದು. ಆದರೆ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಆಂಬ್ಯುಲೆನ್ಸ್ ಮಾತ್ರ ಆ ರಸ್ತೆಯಲ್ಲಿ ಓಡಾಡುವ ಹಾಗಿಲ್ಲವಂತೆ.
ಹೌದು...ಆಂಬ್ಯುಲೆನ್ಸ್ ಕಂಡರೆ ಸಾಕು, ಎಲ್ಲರೂ ದಾರಿ ಬಿಡುತ್ತಾರೆ. ಆದರೆ ಆ ದಾರಿಯಲ್ಲಿ ಸಂಚರಿಸಿದ ಆಂಬ್ಯುಲೆನ್ಸ್ ಗೆ ದಂಡ ವಿಧಿಸಿ ಅಧಿಕಾರಿಗಳು ದರ್ಪ ಮೆರೆದಿದ್ದಾರೆ ನೋಡಿ. ಅಷ್ಟಕ್ಕೂ ಆಂಬ್ಯುಲೆನ್ಸ್ ಗೆ ದಂಡ ವಿಧಿಸಿದ್ದಾದರೂ ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ..
ಹುಬ್ಬಳ್ಳಿ ಧಾರವಾಡ ಮಾರ್ಗ ಮಧ್ಯೆ ನಿರ್ಮಿಸಿರೋ ಕಾರಿಡಾರ್ ಬಿ.ಆರ್.ಟಿ.ಎಸ್ ಸಾರಿಗೆಯ ಚಿಗರಿ ಬಸ್ ಗಳ ಓಡಾಟಕ್ಕಾಗಿ ನಿರ್ಮಿಸಿರುವ ಈ ಪ್ರತ್ಯೇಕವಾದ ಮಾರ್ಗದಲ್ಲಿ ಬಿ ಆರ್ ಟಿ ಎಸ್ ಬಸ್ ಗಳು ಸಂಚರಿಸುತ್ತವೆ. ದೇಶದ ಎರಡನೇ ಬಸ್ ಕಾರಿಡಾರ್ ಎಂದು ಹೆಸರುವಾಸಿಯಾಗಿರುವ ಈ ಕಾರಿಡಾರ್ ನಲ್ಲಿ ಖಾಸಗಿ ವಾಹನಗಳು ಓಡಾಡುವ ಹಾಗಿಲ್ಲ. ಹಾಗಂತ ಪೊಲೀಸರು, ರಾಜಕಾರಣಿಗಳಿಗೆ ಈ ರೂಲ್ಸ್ ಜಾರಿಯಿಲ್ಲ. ರಾಜಕಾರಣಿಗಳು, ಪೊಲೀಸರು ಈ ಕಾರಿಡಾರ್ ನಲ್ಲಿ ಓಡಾಡಬಹುದು. ಆದರೆ ಆಂಬ್ಯುಲೆನ್ಸ್ ಮಾತ್ರ ಓಡಾಡಬಾರದಂತೆ? ಹೌದು...ಆಸ್ಪತ್ರೆಗೆ ರೋಗಿಗಳನ್ನು ದಾಖಲಿಸುವ ಆಂಬ್ಯುಲೆನ್ಸ್ ಈ ಕಾರಿಡಾರ್ ನಲ್ಲಿ ಸಂಚರಿಸಿದ್ದಕ್ಕೆ ಇದೀಗ ದಂಡ ವಿಧಿಸಲಾಗಿದೆ.
ಬಿ.ಆರ್.ಟಿ.ಎಸ್ ಸಾರಿಗೆಯ ಈ ಪ್ರತ್ಯೇಕ ಕಾರಿಡಾರ್ ನಿರ್ಮಾಣ ಅವೈಜ್ಞಾನಿಕವಾಗಿದೆ ಎನ್ನುವ ಆರೋಪವಿದೆ. ಅಲ್ಲದೇ ಈ ಪ್ರತ್ಯೇಕ ಕಾರಿಡಾರ್ ನಿರ್ಮಾಣದಿಂದ ಹುಬ್ಬಳ್ಳಿ ಧಾರವಾಡ ಮಾರ್ಗ ಮಧ್ಯೆ ಸಂಚರಿಸಲು ರಸ್ತೆ ಇಕಟ್ಟಿನಿಂದ ಕೂಡಿದೆ. ಇತಂಹ ಪರಿಸ್ಥಿತಿಯಲ್ಲಿ ಕಾರಡಾರ್ ನಲ್ಲಿ ಆಂಬ್ಯುಲೆನ್ಸ್ ಓಡಾಡಲು ಅನುಮತಿ ಇದ್ದರೂ ಅಧಿಕಾರಿಗಳು ಮಾತ್ರ ಆಂಬ್ಯುಲೆನ್ಸ್ ಗೆ ದಂಡ ವಿಧಿಸಿ ದರ್ಪ ಮೆರೆದಿದ್ದಾರೆ. ಫೆಬ್ರವರಿ 07 ರಂದು ಈ ರಸ್ತೆಯಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಸಂಚರಿಸಿದ ಆಂಬ್ಯುಲೆನ್ಸ್ ಗೆ ಬಿ ಆರ್ ಟಿ ಎಸ್ ಅಧಿಕಾರಿಗಳು 500 ದಂಡ ವಿಧಿಸಿ ದರ್ಪ ತೋರಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಮಾಜಿ ಸಿಎಂ ಹಾಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕನಸಿನ ಯೋಜನೆ ಆಗಿರುವ ಬಿ ಆರ್ ಟಿ ಎಸ್ ಸಾರಿಗೆ ವ್ಯವಸ್ಥೆ ವಿರುದ್ಧ ಒಂದೆಡೆ ಅವರದೇ ಪಕ್ಷದ ಶಾಸಕ ಅರವಿಂದ ಬೆಲ್ಲದ್ ಅಪಸ್ವರ ಎತ್ತಿದ್ದಾರೆ. ಇನ್ನೊಂದೆಡೆ ಜನರ ಜೀವ ಉಳಿಸಲು ಕಾರ್ಯನಿರ್ವಹಿಸುವ ಅಂಬುಲೈನ್ಸ್ ಗಳಿಗೆ ಬಿ ಆರ್ ಟಿ ಎಸ್ ಅಧಿಕಾರಿಗಳು ದಂಡ ವಿಧಿಸಿ ದರ್ಪ ಮೆರೆದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಬಿ ಆರ್ ಟಿ ಎಸ್ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಅವಳಿ ನಗರದ ಬಿ ಆರ್ ಟಿ ಎಸ್ ವಿರುದ್ಧ ಉಗ್ರ ಹೋರಾಟಕ್ಕೆ ಇಳಿಯುವುದಂತೂ ನಿಶ್ಚಿತವಾಗಿದೆ. ಜೀವ ಉಳಿಸುವ ಅಂಬುಲೈನ್ಸ್ ಗಳಿಗೆ ಈ ಕಾರಿಡಾರ್ ನಲ್ಲಿ ತಡೆಯೊಡ್ಡದಿದ್ದರೆ ಸಾಕು ಎನ್ನುವುದು ನಮ್ಮ ಆಶಯವಾಗಿದೆ.
Kshetra Samachara
24/02/2021 03:38 pm