ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಕುಂದಗೋಳ : ಅತಿವೃಷ್ಟಿ ನಡುವೆಯೂ ರೈತ ಬೆಳೆದ ಶೇಂಗಾ ಬೆಳೆ ಮಾರುಕಟ್ಟೆ ತಲುಪಿ ಮಾರಾಟವಾಗದೆ ಇನ್ನು ರೈತನ ಬಳಿ ಉಳಿದಿದ್ದು ಇಂದೊ ನಾಳೆಯೋ ಶೇಂಗಾ ಖರೀದಿ ಕೇಂದ್ರ ಆರಂಭ ಆಗುತ್ತೆ, ಸರ್ಕಾರ ಬೆಂಬಲ ಬೆಲೆ ನೀಡಿ ಶೇಂಗಾ ಖರೀದಿಸುತ್ತೆ, ಎಂಬ ನಂಬಿಕೆ ಬೆನ್ನಟ್ಟಿ ಕುಂದಗೋಳ ಎಪಿಎಂಸಿ ಆವರಣದಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಶೇಂಗಾ ರಾಶಿ ರಾಶಿಗಳೇ ಗೋಚರಿಸುತ್ತಿವೆ.
ಕುಂದಗೋಳ ತಾಲೂಕಿನಲ್ಲಿ ಶೇಂಗಾ ಬೆಳೆದ ರೈತರು ದಲ್ಲಾಳಿಗಳ ಮಾತಿಗೆ ಬೆಲೆ ಕೊಟ್ಟು ಯಾವುದೇ ಖಾಸಗಿ ಮಾರುಕಟ್ಟೆ ವ್ಯಾಪಾರಿಗಳಿಗೆ ಅಗ್ಗದ ಬೆಲೆಗೆ ಶೇಂಗಾ ಮಾರಾಟ ಮಾಡದೆ ಸತತ ಎರೆಡು ತಿಂಗಳಿಂದ ಎಪಿಎಂಸಿ ಆವರಣದಲ್ಲಿ ಶೇಂಗಾ ರಾಶಿ ಮಾಡಿಕೊಂಡು ರೈತರು ಹಗಲು ರಾತ್ರಿ ಕಾಯುತ್ತ ಕುಳಿತಿದ್ದಾರೆ ಈ ಬಗ್ಗೆ ರೈತರ ಮಾತೇನು ನೀವೆ ಕೇಳಿ.
ಇನ್ನು ಈ ರೈತರ ಅನುಕೂಲಕ್ಕಾಗಿ ಶೇಂಗಾ ಖರೀದಿ ಕೇಂದ್ರ ಆರಂಭ ಮಾಡಲು ಶಾಸಕಿ ಕುಸುಮಾವತಿ ಶಿವಳ್ಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು ಪ್ರಯೋಜನ ಸಿಕ್ಕಿಲ್ಲ ಆದ್ರೇ ರೈತರು ಶೇಂಗಾ ಹೊಲಕ್ಕೆ ಮರಳಿ ಗೋಧಿ ಬಿತ್ತಿ ಬೆಳೆ ಮೊಳಕೆ ಓಡೆದರು ಇನ್ನೂ ಶೇಂಗಾ ಮಾರಾಟ ವಾಗದಿರುವುದು ರೈತರ ಕಷ್ಟಕ್ಕೆ ಕಾರಣವಾಗಿದೆ.
Kshetra Samachara
08/11/2020 11:36 am