ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸ್ಕಿಲ್ ಇನ್ ವಿಲೇಜ್ ಮಕ್ಕಳ ಶಿಕ್ಷಣದ ಆತ್ಮಸ್ಥೈರ್ಯದ ಮಾರ್ಗ !

ಕುಂದಗೋಳ : ಸ್ಫುಟವಾಗಿ ಇಂಗ್ಲೀಷ್ ಮಾತಾಡ ಬಲ್ಲೆ ಎಂಬ ರೈತಾಪಿ ಮಕ್ಕಳ ಆತ್ಮಸ್ಥೈರ್ಯ ಹೆಚ್ಚಿಸುವಲ್ಲಿ ದೇಶಪಾಂಡೆ ಫೌಂಡೇಶನ್ ಸ್ಕಿಲ್ ಇನ್ ವಿಲೇಜ್ ಕಾರ್ಯಕ್ರಮ ಯಶಸ್ವಿಯಾಗಿದೆ‌.

ಹಳ್ಳಿ ಸರ್ಕಾರಿ ಶಾಲೆ ಎಂದರೆ ಎಲ್ಲರ ಭಾವನೆ ವಿಭಿನ್ನವಾಗಿರುತ್ತೆ. ಆದರೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಸ್ಕಿಲ್ ಇನ್ ವಿಲೇಜ್ ಕಾರ್ಯಕ್ರಮ ಕಾಲಿಟ್ಟ ಶಾಲೆಗಳ ಚಿತ್ರಣವೇ ಬದಲಾಗಿದೆ.

ಇದು ದೇಶಪಾಂಡೆ ಫೌಂಡೇಶನ್ ಐದು ವರ್ಷಗಳ ಹಿಂದೆ ಆರಂಭಿಸಿದ ಕಾರ್ಯಕ್ರಮ. ಗ್ರಾಮೀಣ ಸರ್ಕಾರಿ ಶಾಲೆಗೆ ಬರುತ್ತಾರೆ ಫೌಂಡೇಶನ್ ನಿಯೋಜಿತ ಓರ್ವ ಟೀಚರ್. 5 ರಿಂದ 9 ನೇ ತರಗತಿ ಮಕ್ಕಳಿಗೆ ಶಾಲೆ ಆರಂಭಕ್ಕೂ ಮೊದಲು ಮುಕ್ತಾಯದ ನಂತರ ಚಟುವಟಿಕೆ ಆಧಾರಿತ ಇಂಗ್ಲೀಷ್ ಶಿಕ್ಷಣ ಆರಂಭವಾಗುತ್ತೆ.

ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಮಕ್ಕಳ ವ್ಯಾಕರಣ ಬದ್ಧ ಇಂಗ್ಲಿಷ್ ವಾಕ್ ಚಾತುರ್ಯ ನೋಡಿ.

ತಮ್ಮ ಮಕ್ಕಳು ಶಿಕ್ಷಣದ ಜೊತೆಗೆ ಕಮ್ಯುನಿಕೇಷನ್ ಸ್ಕಿಲ್, ಲೈಫ್ ಸ್ಕಿಲ್ ಶಿಕ್ಷಣ ಪಡೆಯುತ್ತಿದ್ದಾರೆಂದರೆ ರೈತಾಪಿ ಪಾಲಕರಿಗೆ ಹೆಮ್ಮೆ ತಾನೆ?

ಹೊಸ ಉತ್ಸಾಹ ತುಂಬುವ ಸ್ಕಿಲ್ ಇನ್ ವಿಲೇಜ್ ಕ್ಲಾಸ್'ಗೆ ಮಕ್ಕಳನ್ನು ಕಳುಹಿಸಲು ಪಾಲಕರಿಗೂ ಸಹ ಬಲು ಇಷ್ಟ.

ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಸಹಕಾರ ನೀಡಿದ ಯರಗುಪ್ಪಿ ಸರ್ಕಾರಿ ಶಾಲಾ ಶಿಕ್ಷಕರು ಅಭಿನಂದನಾರ್ಹರು.

ಗ್ರಾಮೀಣ ವಿದ್ಯಾರ್ಥಿಗಳಲ್ಲಿಯ ಇಂಗ್ಲೀಷ್ ಭಾಷೆ ಭಯ ಹೋಗಲಾಡಿಸುವ ಫೌಂಡೇಶನ್ ಸ್ಕಿಲ್ ಇನ್ ವಿಲೇಜ್ ಎಂದ್ರೇ ಹೆಮ್ಮೆಯ ವಿಷಯ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/04/2022 09:45 am

Cinque Terre

215.75 K

Cinque Terre

2

ಸಂಬಂಧಿತ ಸುದ್ದಿ