ಕುಂದಗೋಳ: ಗ್ರಾಮೀಣ ಮಕ್ಕಳಿಗೆ ಇಂಗ್ಲೀಷ್ ಭಾಷೆ ಕಬ್ಬಿಣದ ಕಡಲೆ. ನಗರದ ಮಕ್ಕಳಂತೆ ತಾವೂ ಪಟಪಟನೆ ಇಂಗ್ಲೀಷ್ ದಲ್ಲಿ ಮಾತನಾಡಬೇಕೆಂಬ ಹಂಬಲ ಅವರಲ್ಲಿರುವುದು ಸಹಜವಲ್ಲವೆ? ಹೀಗಾಗಿ ಇಂಗ್ಲೀಷ್ ಬಾರದಿರುವುದು ಆ ಮಕ್ಕಳ ಕೀಳರಿಮೆಗೂ ಕಾರಣ.
ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಮಾತುಗಾರಿಕೆ ,ಸಂಭಾಷಣೆ, ಸಂವಹನ ಕಲೆ ಬೆಳೆಸಿ, ಪ್ರೋತ್ಸಾಹಿಸಲು ದೇಶಪಾಂಡೆ ಫೌಂಡೇಶನ್ " ಸ್ಕಿಲ್ ಇನ್ ವಿಲೇಜ್'' ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಮುಂದಾಗಿದೆ. ಇದು ಅವರ ಆತ್ಮವಿಶ್ವಾಸ ವೃದ್ಧಿಗೂ ಪೂರಕವಾಗಿದೆ.
2017 ರಲ್ಲಿ ಆರಂಭವಾದ " ದೇಶಪಾಂಡೆ ಫೌಂಡೇಶನ್ ಸ್ಕಿಲ್ ಇನ್ ವಿಲೇಜ್ '' ಕಾರ್ಯಕ್ರಮ ವಿಶಿಷ್ಟವಾಗಿದೆ. ಗ್ರಾಮೀಣ ಸರ್ಕಾರಿ ಶಾಲೆಯೊಂದನ್ನು ಆಯ್ಕೆ ಮಾಡಿ ಫೌಂಡೇಶನ್ ವತಿಯಿಂದ ಒಬ್ಬ ಅನುಭವಿ ಶಿಕ್ಷಕರನ್ನು ನೀಡಲಾಗುತ್ತಿದೆ. 5 ರಿಂದ 9 ನೇ ತರಗತಿ ಮಕ್ಕಳಿಗೆ ಅತ್ಯಂತ ಸರಳ ಇಂಗ್ಲೀಷ್ ಭಾಷೆಯಲ್ಲಿ ಶಿಕ್ಷಣ ನೀಡುವುದೇ ಕಾರ್ಯಕ್ರಮದ ಮೂಲ ಧ್ಯೇಯ.
ಕೇವಲ ಪದಗಳ ಬಣ್ಣನೆಯಿಂದ ಹೇಳಿದರು ಸಾಲದು. ಬನ್ನಿ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಹೋಗಿ ಆ ಮಕ್ಕಳ ಇಂಗ್ಲೀಷ್ ಮಾತನ್ನು ಕೇಳೋಣ.
ವಿದ್ಯಾರ್ಥಿಗಳಿಗೆ ನೀಡುವ ಕಮ್ಯೂನಿಕೇಷನ್, ಲೈಫ್ ಸ್ಕಿಲ್ ಶಿಕ್ಷಣದ ಬಗ್ಗೆ ಹೇಳುತ್ತಾರೆ ಶಿಕ್ಷಕಿ ನಯನಾ ಬಳಿಗಾರ್
200ಕ್ಕೂ ಹೆಚ್ಚು ಮಕ್ಕಳ ಸ್ಕಿಲ್ ಇನ್ ವಿಲೇಜ್ ಕಲಿಕೆಯು ಪಾಲಕರಿಗೂ ಸಂತಸ ತಂದಿದೆ.
ಸ್ಕಿಲ್ ಇನ್ ವಿಲೇಜ್ ಕಾರ್ಯಕ್ರಮದಲ್ಲಿ ಯರಗುಪ್ಪಿ ಶಾಲಾ ಶಿಕ್ಷಕರೂ ಅಷ್ಟೇ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
ದೇಶಪಾಂಡೆ ಫೌಂಡೇಶನ್ ಸ್ಕಿಲ್ ಇನ್ ವಿಲೇಜ್ ಕಾರ್ಯಕ್ರಮ, ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಕನಸನ್ನು ಸಾಕಾರಗೊಳಿಸುತ್ತಿದೆ ಎಂದರೂ ಅತಿಶಯೋಕ್ತಿಯಾಗದು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/04/2022 04:18 pm