ಕುಂದಗೋಳ : ಇದೇನು ಮಲೆನಾಡಿನ ವಾತಾವರಣ ಎನ್ನುವಂತಹ ಶಾಲೆ ಆವರಣ, ಕಣ್ಣು ಹಾಯಿಸಿದಷ್ಟೂ ದೂರ ಜ್ಞಾನ ಭಂಡಾರವನ್ನೇ ನೀಡುವ ಗೋಡೆಗಳು, ಮಕ್ಕಳಿಗೆ ವಿಧ ವಿಧ ಆಟೋಟದ ಪಠ್ಯ ಚಟುವಟಿಕೆಗಳು ಇವರು
ಶಿಕ್ಷಕರಾ ಈ ಮಕ್ಕಳ ಪಾಲಕರಾ ? ಎನ್ನುವಂತಹ ಅನ್ಯೋನ್ಯ ಭಾವಕ್ಕೆ ಸಾಕ್ಷಿಯಾಗಿರುವುದೇ ಕುಂದಗೋಳ ತಾಲೂಕಿನ ಬು.ಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.
ಅರೆ ! ಈ ಸರ್ಕಾರಿ ಶಾಲೆಯಲ್ಲಿ ಅಂತಹ ವಿಶೇಷ ಎನಿದೆ ಅಂದ್ರಾ ? ಸ್ವಾಮಿ ಶಾಲೆಗೆ 2019 ರಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಶಾಲೆ ಪ್ರಶಸ್ತಿ ಜೊತೆ 2.50 ಲಕ್ಷ ರೂಪಾಯಿ ನಗದು ಬಹುಮಾನ ಅಂದಿನ ಮುಖ್ಯಮಂತ್ರಿ ಬಿ.ಎಸ್.ವೈ ಅವರಿಂದ ಸ್ವಿಕರಿಲಸ್ಪಟ್ಟಿದೆ, ಈ ಪ್ರಶಸ್ತಿ ಬರಲು ಅಷ್ಟೇ ಪ್ರಮುಖ ಕಾರಣಗಳು ಇವೆ.
ಬು.ಕೊಪ್ಪದ ಕಿರಿಯ ಪ್ರಾಥಮಿಕ ಶಾಲೆ ಕೇವಲ 8 ಮಕ್ಕಳಿಂದ ಆರಂಭವಾಗಿ ಪ್ರಸ್ತುತ 123 ಮಕ್ಕಳನ್ನೂ ಹೊಂದಿದ್ದು, ಈ ಶಾಲೆ ಮಕ್ಕಳು ಯಾವುದೇ ಪಠ್ಯ, ಪಾಠ, ಸ್ಪರ್ಧೆಯಲ್ಲಿ ಹಿಂದೆ ಬಿಳದೇ ರಾಜ್ಯ ಮಟ್ಟದವರೆಗೂ ಹೆಸರು ಮಾಡಿದ್ದಾರೆ. ಇನ್ನೂ ವಿಶೇಷ ಎಂದ್ರೇ, ಈ ಶಾಲಾ ಆವರಣ ಗೋಡೆಗಳೆ ಗ್ರಂಥಾಲಯವಾಗಿ ಮಾರ್ಪಟ್ಟು, ಮಕ್ಕಳು ಕುಳಿತರು ನಿಂತರೂ ಅಕ್ಷರ ಓಟವೇ ಓಡುತ್ತದೆ.
ಇನ್ನೂ ಕಾರ್ಯ ನಿರ್ವಹಿಸುತ್ತಿರುವ ದಂಪತಿ ಶಿಕ್ಷಕರಿಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳು ಅವರ ಕಾರ್ಯ ನೋಡಿ ಅರಸಿ ಬಂದಿದ್ದು, ಗ್ರಾಮಸ್ಥರ ಮಕ್ಕಳ ಪ್ರೋತ್ಸಾಹದ ಫಲವೇ ಸಲಿ.
ಕಳೆದ 17 ಮತ್ತು 15 ವರ್ಷಗಳಿಂದ ಬು.ಕೊಪ್ಪದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಂಪತಿ ಶಿಕ್ಷಕ ಸುಲೇಮಾನ್ ಹಾಗೂ ಎಲ್,ಎನ್,ಪಟಗಾರ ಶಾಲೆ ಶಾಲಾ ಮಕ್ಕಹನ್ನು ಸ್ವತಃ ತಮ್ಮ ಮನೆ ಮಕ್ಕಳು ಎಂಬಂತೆ ಕಾಳಜಿ ವಹಿಸಿ ಕರ್ತವ್ಯ ನಿರ್ವಹಿಸಿ ಸಧ್ಯ ಪ್ರಭಾರಿ ಕರ್ತವ್ಯ ನಿಮಿತ್ತ ಹೊಸ ಅಭಿವೃದ್ಧಿಗಾಗಿ ಗಡೇನಕಟ್ಟಿ ಶಾಲೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಒಟ್ಟಾರೆ ಕಿರಿಯ ಪ್ರಾಥಮಿಕ ಶಾಲೆ ಕರ್ತವ್ಯದಲ್ಲಿ ಹಿರಿಮೆ ಗಳಿಸಿದ ದಂಪತಿ ಶಿಕ್ಷಕರಿಗೊಂದು ಸಲಾಂ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
04/02/2022 05:24 pm