ವಿಶೇಷ ವರದಿ : ಶ್ರೀಧರ ಪೂಜಾರ
ಕುಂದಗೋಳ: ಇಲ್ಲೋಂದು ಶಾಲೆಯಲ್ಲಿ ಪುಸ್ತಕಗಳು ಹೇಳುವ ಪಾಠವನ್ನು ಶಾಲೆ ಗೋಡೆಗಳು ಹೇಳ್ತವೆ, ಮಕ್ಕಳ ಕಲಿಕೆಯ ಶಾಲಾ ಕೊಠಡಿ ಸಾರಿಗೆ ಬಸ್ ಆಗಿ ಬಣ್ಣದಲ್ಲಿ ಬದಲಾಗಿದೆ, ಶಾಲಾ ಆವರಣದಲ್ಲಿ ಮರ ಗಿಡಗಳ ನಡುವೆ ಪಕ್ಷಿ, ಪ್ರಾಣಿ, ಚಿತ್ರಗಳು ಮೂಡಿ ಬಂದಿವೆ.
ಇನ್ನೂ ಶಾಲಾ ಕೊಠಡಿ ಒಳಗೆ ಹೋದ್ರೆ ಕನ್ನಡ, ಸಮಾಜ ವಿಜ್ಞಾನ, ಗಣಿತ, ಇತಿಹಾಸ, ಕಲೆ, ಸಂಗೀತ ಹೀಗೆ ಸಾಲು ಸಾಲು ಜ್ಞಾನ ಭಂಡಾರವೇ ತೆರೆದು ಬಿಡುತ್ತದೆ.
ಇಂತಹದ್ದೊಂದು ಶೈಕ್ಷಣಿಕ ಬದಲಾವಣೆ ಹಾಗೂ ಸಾಧನೆಗೆ ಸಾಕ್ಷಿಯಾದವರೇ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಶಾಲಾ ಶಿಕ್ಷಕಿ ಚಂದ್ರಿಕಾ. ಎಸ್
ಈ ಶಾಲೆ ವಾತಾವರಣವಷ್ಟೇ ಅಲ್ಲಾ ಶಾಲೆ ಶಾಲಾ ಮಕ್ಕಳು ಅಷ್ಟೇ ಎಕ್ಸ್ಪರ್ಟ್. ಗಣಿತ ಲೆಕ್ಕಾ, ಮಗ್ಗಿಗಳು ಜ್ಞಾನಪೀಠ ಪುರಸ್ಕೃತರು ಹೆಸರು ಇನ್ನೂ ವಿಶೇಷ ಅಂದ್ರೇ ನವೋದಯ, ಕಸ್ತೂರಬಾ ಶಾಲೆಗೆ ಇಲ್ಲಿನ ಮಕ್ಕಳು ಆಯ್ಕೆಯಾಗಿ ಗ್ರಾಮೀಣ ಭಾಗಕ್ಕೆ ಕೀರ್ತಿ ತಂದಿದ್ದಾರೆ.
ಇನ್ನೂ ಶಾಲಾ ಮಕ್ಕಳು ಜೊತೆ ಮಕ್ಕಳಂತೆ ಬೆರೆತ ಶಿಕ್ಷಕಿ ಚಂದ್ರಿಕಾ, ಶಾಲಾ ವಾತಾವರಣದ ಅಭಿವೃದ್ಧಿ, ಆರೋಗ್ಯ, ಓದು ಕಲಿಕಾ ಅಭಿಯಾನ, ಹೀಗೆ ಎಲ್ಲಾ ಚಟುವಟಿಕೆಗಳಲ್ಲಿ ತಾವೊಬ್ಬ ಮಗುವಾಗಿ ಬೆರೆತು ಬಿಡ್ತಾರೆ.
ಒಂದು ಗ್ರಾಮೀಣ ಭಾಗದ ಶಾಲೆಯ ಮಕ್ಕಳನ್ನು ಯಾವುದೇ ಖಾಸಗಿ ಹಾಗೂ ಆಂಗ್ಲ ಮಾಧ್ಯಮ ಶಾಲೆಗೆ ಪೈಪೊಟಿ ನೀಡುವಂತೆ ಶ್ರಮ ವಹಿಸುವ ಶಿಕ್ಷಕಿ ಚಂದ್ರಿಕಾ ಗ್ರಾಮಸ್ಥರ ಸಹಾಯ ಮತ್ತು ತಮ್ಮ ಸ್ವಂತ ಹಣದಲ್ಲೇ ಸಂಪೂರ್ಣ ಶಾಲೆಯನ್ನೂ ಚಿತ್ರಗಳ ಆಕರ್ಷಣೀಯ ಕೇಂದ್ರ ಬಿಂದುವಾಗಿ ಮಾಡಿದ್ದಾರೆ.
ಮಕ್ಕಳು ಮತ್ತು ಶಾಲೆ ಮೇಲಿರುವ ಶಿಕ್ಷಕಿ ಪ್ರೇಮಕ್ಕೆ ಅದೆಷ್ಟೋ ಸನ್ಮಾನ ಪುರಸ್ಕಾರದ ಜೊತೆ ಜಿಲ್ಲಾ ಉತ್ತಮ ಶಿಕ್ಷಕಿ, ನೇಷನ್ ಬಿಲ್ಡರ್ ಅವಾರ್ಡ್, ಅಕ್ಷರ ಪೌಂಡೇಶನ್ ಪ್ರಶಂಸೆ ಇವರ ಮುಡಿಗೇರಿದೆ.
ಒಟ್ಟಾರೆ ಸಂಬಳಕ್ಕಾಗಿ ದುಡಿಯುದೇ ಒಟ್ಟು ಹಿರೇಹರಕುಣಿ ಶಾಲೆಯ 1 ರಿಂದ 5ನೇ ತರಗತಿ 90 ಮಕ್ಕಳನ್ನು 2 ಜನ ಶಿಕ್ಷಕರ ಕೊರತೆ ನಡುವೆ ತಾವೊಬ್ಬರೇ ಹೊಸ ಸಾಧನೆಗಾಗಿ ಪ್ರೇರೇಪಿಸುವ ಶಿಕ್ಷಕಿ ಚಂದ್ರಿಕಾ, ಎಸ್ ಅವರಿಗೆ ಒಂದು ಸಲಾಂ ಹೇಳಲೇಬೇಕು.
Kshetra Samachara
29/01/2022 09:17 am