ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಬಟಾಟಿ ಹೆಂಗ್ ಕಿಲೋ ಐತ್ರಿ...ಹಂಗಾರ ಒಂದ ಕಿಲೊ ಕೊಡ್ರಿ

ಕುಂದಗೋಳ : ಅಣ್ಣಾರ ಬಟಾಟಿ ಹೆಂಗ್ ಕಿಲೋರಿ... ಹಸಿ ಮಣಸಿನಕಾಯಿ ಕಿಲೋಕ್ ಹ್ಯಾಂಗ್ರಿ? ಹಂಗರ ನಮಗ ಒಂದ ಕಿಲೋ ಬಟಾಟಿ ಕೊಡ್ರಿ...ನಮಗೂ ಅರ್ಧಾ ಕಿಲೋ ಮೆಣಸಿಕಾಯಿ ಹಾಕ್ರಿ.

ಇದೇನಪ್ಪ ಶಾಲೆ ಬಿಟ್ಟು ತರಕಾರಿ ಖರೀದಿಗೆ ಮಕ್ಕಳು ಬಂದಿದ್ದಾರಲ್ಲ? ಟೀಚರ್‌ಗಳು ಹ್ಯಾಂಗ ಇವ್ರನ ಬಿಟ್ರು ಅಂತ ಕೇಳ್ತಿರಾ?

ಶಿಸ್ತಾಗಿ ಸಮವಸ್ತ್ರ ಧರಿಸಿದ ಮಕ್ಕಳು ಸಂತೆಯಲ್ಲಿ ಓಡಾಡಿ ತರಕಾರಿ ಬೇರೆ ಬೇರೆ ಸೊಪ್ಪು ಖರೀದಿ ಮಾಡುವದನ್ನು ನೋಡಿದಾಗ ಈ ಪ್ರಶ್ನೆ ಉದ್ಭವಿಸುವುದ ಸಹಜ.

ಆದರೆ ಸಮೀಪದ ಬೆಟದೂರಿನ ಚೇತನಾ ಶಾಲಾ ಮಕ್ಕಳಿಗೆ ಸಂತೆ ಬಗ್ಗೆ ಪರಿಚಯಿಸಲು ಶಿಕ್ಷರು ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ತರಕಾರಿಗಳು ಎಲ್ಲಿಂದ ಬರುತ್ತವೆ? ಹೇಗೆ ಮಾರಾಟವಾಗುತ್ತವೆ? ಅವುಗಳ ಬೆಲೆ ಏನು ಎಂಬುದರ ಬಗ್ಗೆ ಪ್ರ್ಯಾಕ್ಟಿಕಲ್ ಆಗಿ ತಿಳಿಹೇಳುವ ಪ್ರಯತ್ನ ಶಿಕ್ಷಕರದಾಗಿತ್ತು.

ಶಾಲೆ ಮಕ್ಕಳು ಸಂತೆಗೆ ಹೋಗಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಈ ಮಕ್ಕಳ ಬುದ್ಧಿವಂತಿಕೆ ನೋಡೋಕೆ ಹಿಂದೆ ಶಿಕ್ಷಕರ ಬಳಗ ನಿಂತಿತ್ತು. ಶಾಲಾ ಹಂತದಲ್ಲೇ ಮಕ್ಕಳಿಗೆ ಇಂತಹದ್ದೊಂದು ಅವಕಾಶ ಕಲ್ಪಿಸಿ ಜ್ಞಾನಾರ್ಜನೆಗೆ ಪೂರಕವಾದ ವಾತಾವರಣ ತಿಳಿಸಿದ ಸ್ವಾಮಿ ಚೇತನಾ ಶಾಲಾ ಶಿಕ್ಷಕರಿಗೆ ಭೇಷ್ ಎನ್ನಲೇಬೇಕು.

Edited By : Nagaraj Tulugeri
Kshetra Samachara

Kshetra Samachara

01/12/2021 11:48 am

Cinque Terre

37.46 K

Cinque Terre

5

ಸಂಬಂಧಿತ ಸುದ್ದಿ