ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ 70 ಮತ್ತು 71 ಘಟಿಕೋತ್ಸವದ ಅಂಗವಾಗಿ ಕವಿವಿಯ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕೃಷಿ ವಿವಿ ಕುಲಪತಿ ಎಂ.ಬಿ. ಚೆಟ್ಟಿ ಹಾಗೂ ಕವಿವಿ ಕುಲಪತಿ ಕೆ. ಬಿ. ಗುಡಸಿ ಪ್ರಶಸ್ತಿ ಪ್ರದಾನ ಮಾಡಿದರು.
ಈ ವೇಳೆ ಸಂಗೀತ, ಚಿತ್ರಕಲಾ ಮಹಾವಿದ್ಯಾಲಯದ ವಿಶೇಷಚೇತನ ವಿದ್ಯಾರ್ಥಿ ಕೃತಿಕಾ ಜಂಗಿನಮಠ ಬಂಗಾರದ ಪದಕ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಳು.
Kshetra Samachara
09/10/2021 05:11 pm