ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ
ಹುಬ್ಬಳ್ಳಿ- ಅದೆಷ್ಟೋ ಜನ ಮಕ್ಕಳಿಲ್ಲದೆ ಕೊರಗೋದನ್ನ ನಾವು ನೋಡೆ ಇರ್ತೆವಿ, ಆದರೆ ಇಲ್ಲಿ ಮನೆತುಂಬಾ ಮಕ್ಕಳೆನೋ ಇದ್ದಾರೆ, ಸಾಕಿ ಸಲುಹಲು ಹೆತ್ತವರೆ ಇಲ್ಲದಂತಾಗಿದೆ. ಇಂತಹ ಮಕ್ಕಳಿಗೆ ತಂದೆ ತಾಯಿಯ ಪ್ರೀತಿ ಮಮತೆ ಕಡಿಮೆ ಆಗಬಾರದೆಂದು ಇಲ್ಲೊಂದು ಮುಸ್ಲಿಂ ಸಂಸ್ಥೆ ನಿರಂತರವಾಗಿ, ಅನಾಥ ಮಕ್ಕಳಿಗೆ ಆಸರೆ ಜೊತೆಗೆ ಶಿಕ್ಷಣ ನೀಡಿ ಅವರಿಗೆ ಉತ್ತಮ ಜೀವನ ರೂಪಿಸುತ್ತಿದೆ. ಅಷ್ಟಕ್ಕೂ ಆ ಸಂಸ್ಥೆ ಯಾವದು ಅನ್ನೊದನ್ನು ತೋರಸ್ತೇವಿ ನೋಡಿ....
ಹೌದು,,,, ತಂದೆ ತಾಯಿ ಕಳೆದುಕೊಂಡ ಅದೆಷ್ಟೋ ಮಕ್ಕಳು ಅನಾಥವಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಅಂತ ಮಕ್ಕಳಿಗೆ ಕುರಾನ್, ಮತ್ತು ಶಾಲಾ ವಿದ್ಯಾಭ್ಯಾಸ ನೀಡುತ್ತಿರುವ ಹುಬ್ಬಳ್ಳಿಯ ಹಾದಿ ಎಜ್ಯುಕೇಶನ್ ಆ್ಯಂಡ್ ವೇಲ್ಫೇರ್ ಟ್ರಸ್ಟ್ . ಈ ಸಂಸ್ಥೆ ಯಾವುದೆ ಜಾತಿ ಧರ್ಮ ಎನ್ನದೆ ಮಕ್ಕಳನ್ನು ಸಾಕಿ ಸಲುಹಿ, ಶಿಕ್ಷಣ ಕೊಡಿಸಿ, ಆ ಮುಗ್ದ ಮಕ್ಕಳ ಜೀವನ ರೂಪಿಸುತ್ತಿದ್ದಾರೆ.
ನಿರ್ಗತಿಕ ಹಾಗೂ ಸೌಲಭ್ಯಗಳಿಂದ ವಂಚಿತ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬರಬೇಕು. ಅವರಿಗೂ ಒಂದು ಬದುಕು ಕಟ್ಟಿಕೊಡಬೇಕೆಂಬ ಧ್ಯೇಯ ಇಟ್ಟುಕೊಂಡು ಎಮ್.ಜಿ.ಮನ್ನಾನಿ 2011 ರಂದು ಈ ಅನಾಥಾಶ್ರಮ ಸ್ಥಾಪಿಸಿದ್ದಾರೆ. ಈ ಆಶ್ರಮ ಹುಬ್ಬಳ್ಳಿಯ ಗಾರ್ಡನ್ ಪೇಟೆಯಲ್ಲಿ ಒಂದು ಚಿಕ್ಕ ಬಾಡಿಗೆ ಮನೆಯಲ್ಲಿ ಮೂರು ಮಕ್ಕಳಿಂದ ಪ್ರಾರಂಭವಾದ ಈ ಅನಾಥಾಶ್ರಮ, ಈಗ ಸಧ್ಯ 53 ಅನಾಥ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಸರ್ಕಾರದ ಯಾವ ಅನುದಾನವನ್ನೂ ತೆಗೆದುಕೊಳ್ಳದೆ, ಸಮಾಜದ ದಾನಿಗಳು ಹಾಗೂ ಸಂಘ ಸಂಸ್ಥೆಗಳ ನೆರವಿನಲ್ಲೇ ಮಕ್ಕಳ ಪಾಲನೆ, ಪೋಷಣೆ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ತಮ್ಮ ಸ್ವಂತ ಮಕ್ಕಳಂತೆ ಈ ಅನಾಥ ಮಕ್ಕಳನ್ನು ಸಹ ನೋಡಿಕೊಳ್ಳುತ್ತಿರುವ ಈ ಸಂಸ್ಥೆಗೆ, ಸರ್ಕಾರ ಮತ್ತು ಜನರ ಸಹಕಾರ ಬೇಕಾಗಿದೆ. ಸಹಾಯ ಮಾಡಬೇಕು ಎನ್ನುವವರು 7795260131 ಸಂಪರ್ಕಿಸಬಹುದು.
Kshetra Samachara
28/09/2021 04:11 pm