ವರದಿ: ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ- ಆತ ದಿನವಿಡಿ ಆಟೋ ಓಡಿಸಬೇಕು. ಅದರಿಂದ ಬಂದ ನಾಲ್ಕು ಕಾಸಿನಿಂದಲೇ ಹೆಂಡತಿ, ಮಕ್ಕಳನ್ನ ಸಾಕಬೇಕು, ಓದಿಸಬೇಕು, ಇಡಿ ಕುಟುಂಬ ಸಂಬಾಳಿಸಬೇಕು. ಇಂತಹ ಆಟೋ ಚಾಲಕನೊಬ್ಬನ ಮಗಳು ಎಮ್ ಎಸ್ ಸಿ ನರ್ಸಿಂಗ್ ನಲ್ಲಿ ರಾಜ್ಯಕ್ಕೆ 9 ನೇ ರ‍್ಯಾಂಕ್ ಗಳಿಸಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾಳೆ....
ಹೌದು, ಹೀಗೆ ಓದುತ್ತಾ ಕುಳಿತಿರುವ ಈಕೆಯ ಹೆಸರು, ಸ್ಟೆಫಿ ದೆವದಾನ್ ಪಾಟೀಲ್. ಮೂಲತಃ ಹುಬ್ಬಳ್ಳಿಯ ಗೋಲ್ಡನ್ ಪಾರ್ಕ ವಿಜಯನಗರದ ನಿವಾಸಿ, ಹುಬ್ಬಳ್ಳಿಯ ಖಾಸಗಿ ಕಾಲೇಜುಯೊಂದರಲ್ಲಿ ಎಮ್ ಎಸ್ ಸಿ ನರ್ಸಿಂಗ್ ನಲ್ಲಿ ರಾಜ್ಯಕ್ಕೆ 9 ನೇ ರ‍್ಯಾಂಕ್ ಪಡೆದು, ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ.
ಇನ್ನು ಇವಳ ತಂದೆ ಕುಟುಂಬದ ನಿರ್ವಹಣೆ ಜೊತೆಗೆ ಛಲ ಬಿಡದೆ ತನ್ನ ಮಗಳನ್ನು ಓದಿಸಲು ಆಟೊ ಓಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮನೆಯ ಬಡತನ ನೋಡಿದ ಆಕೆ ಹಗಲು-ರಾತ್ರಿ ಎನ್ನದೆ ಓದುತ್ತಿದ್ದಳು. ಅಷ್ಟಕ್ಕೂ ತಾಯಿಯ ಕಿವಿ ಮಾತು ಹೇಳುತ್ತಿರುವುದನ್ನೆ ಮನದಲ್ಲಿ ಇಟ್ಟುಕೊಂಡ ಸ್ಟೆಫಿ, ಶಿಕ್ಷಣದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಛಲ ಬಿಡದೆ, ಓದಿ ರಾಜ್ಯಕ್ಕೆ ಎಮ್ ಎಸ್ ಸ್ಸಿ ನರ್ಸಿಂಗ್ ನಲ್ಲಿ ಉತ್ತಮ ಸಾಧನೆ ಮಾಡಿರುವ ಅನುಭವ ಹಂಚಿಕೊಂಡಿದ್ದಾಳೆ.
ಇನ್ನು ಚಿಕ್ಕ ವಯಸ್ಸಿನಲ್ಲಿಯೇ ಶಿಕ್ಷಣದಲ್ಲಿರುವ ಆಸಕ್ತಿ ಕಂಡ ಕುಟುಂಬಸ್ಥರು, ಏನಾದರೂ ಮಾಡಿ ಇವಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕೆಂದು, ತಂದೆ ತಾಯಿ ಕಷ್ಟ ಪಟ್ಟು ಶಿಕ್ಷಣ ನೀಡಿರುವ ಫಲದಿಂದ ಈಗ ಸ್ಟೆಫಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ನಿಂದ ಅದೆಷ್ಟೋ ಮಕ್ಕಳ ಶಿಕ್ಷಣ ಕಳೆದುಕೊಳ್ಳುತ್ತಿರುವವರ ನಡುವೆಯೂ ಬಡತನವನ್ನೆ ಸವಾಲು ಆಗಿ ಪರಿಗಣಿಸಿದ ಸ್ಟೆಫಿ ಪಾಟೀಲ್ ಮೊದಲು ವಿದ್ಯಾಭ್ಯಾಸ ಆಮೇಲೆ ಇತ್ಯಾದಿ ಎಂದುಕೊಂಡು ಹಗಲಿರುಳು ಶ್ರಮಿಸಿ ತಂದೆ ತಾಯಿಯ ಕನಸು ನನಸ್ಸು ಮಾಡಿದ್ದಾಳೆ...
ಒಟ್ಟಿನಲ್ಲಿ ಆಟೋ ಓಡಿಸಿ ಕುಟುಂಬ ನಿರ್ವಹಣೆ ಜೊತೆಗೆ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ರಾಜ್ಯಕ್ಕೆ ರ‍್ಯಾಂಕ್ ಪಡೆದ ಸ್ಟೆಫಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ಇವಳಂತೆ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಪಬ್ಲಿಕ್ ನೆಕ್ಸ್ಟ್ ಮೂಲಕ ಆಲ್ ದ ಬೆಸ್ಟ್..
Kshetra Samachara
22/01/2021 09:27 am