ಕುಂದಗೋಳ : ಕುಂಟುತ್ತಿರುವ ಕುಟುಂಬದ ಆರ್ಥಿಕ ಪರಿಸ್ಥಿತಿ, ಬೆನ್ನ ಹಿಂದೆ ಅವಿತುಕೊಂಡು ಕಾಡುವ ಕುಟುಂಬದ ಕಹಿ ನೆನಪುಗಳ ನಡುವೆ ಅಪ್ಪಟ ಹಳ್ಳಿಯ ಮಗ ನೀಟ್ ಪರೀಕ್ಷೆಯನ್ನ ಒಂದೇ ಚಾನ್ಸ್'ಗೆ ಪಾಸ್ ಮಾಡಿ ಮೆಡಿಕಲ್ ಸೀಟ್ ಗಿಟ್ಟಿಸಿಕೊಳ್ಳುವುದು ಅಂದ್ರೇ ಸಾಮಾನ್ಯವಾ ? ಅದು ಸಾಧನೆಯೇ ಸರಿ.
ಅಂತಹ ಸಾಧನೆಯನ್ನು ಇಲ್ಲೋಂದು ಪ್ರತಿಭೆ ಸಾಧಿಸಿ ತೋರಿಸಿದ್ದು, ವೈದ್ಯನಾಗಿ ಮರಳಿ ಗ್ರಾಮೀಣ ಜನರ ಸೇವೆ ಮಾಡಲು ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿಗೆ ವೈದ್ಯಕೀಯ ಶಿಕ್ಷಣ ಅಭ್ಯಾಸ ಮಾಡಲು ಹೊರಡಲು ಸಜ್ಜಾಗಿದ್ದಾನೆ.
ಇದ್ಯಾರಪ್ಪ ಅಂದ್ರೇ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಮಗ ಸಿದ್ದಲಿಂಗೇಶ್ ನಿಜಗುಣೇಶ್ ಹೂಗಾರ ಹೌದು, ಇತನೇ ಮೆಡಿಕಲ್ ಸೀಟ್ ಗಿಟ್ಟಿಸಿಕೊಂಡ ಸಾಧಕ. ಕನ್ನಡ ಸಾಲಿ ಮಕ್ಕಳು ಸಾಧನೆ ಮಾಡ್ತಾರೆ, ಓದುತ್ತಾರೆ, ಗೆಲ್ಲುತ್ತಾರೆ ಎಂಬ ಮಾತನ್ನ ನಿಜ ಮಾಡಿ ತೋರಿಸಿದವ.
ಪ್ರಾಥಮಿಕ ಶಿಕ್ಷಣವನ್ನು ಸ್ವಂತ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಗಿಸಿ, ನಂತರ 6-10 ತರಗತಿಯನ್ನ ಧಾರವಾಡದ ಜೆ.ಎನ್.ವಿ ನವೋದಯ ಶಾಲೆಯಲ್ಲಿ ಕಲಿತು ಅಲ್ಲಿನ ಹಿರೇಮಲ್ಲೂರು ಈಶ್ವರನ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವ್ಯಾಸಂಗ ಮಾಡಿ ನೀಟ್ ಪರೀಕ್ಷೆಯಲ್ಲಿ ಸ್ಪೇಶಲ್ ಕೆಟಗರಿ ಒಳಗೆ 967ನೇ ರ್ರ್ಯಾಂಕ್ ಪಡೆದು ಮೆಡಿಕಲ್ ಸೀಟ್ ಪಡೆದ ಪ್ರತಿಭಾವಂತ. ಆತನ ಮಾತೇನು ನೀವೆ ಕೇಳಿ.
ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿ ತನ್ನ ಅಲ್ಪ ವೇತನದಲ್ಲೇ ಮಗನಿಗೆ ವಿಧ್ಯಾಭ್ಯಾಸ ನೀಡಿ ಸದ್ಯ ಆತನ ಸಾಧನೆಯನ್ನ ಕಂಡು ಕಣ್ಣಂಚಲ್ಲಿನ ಕಂಬನಿ ಸರಿಸಿ ಏನು ಹೇಳಿದ್ರೂ ಗೊತ್ತಾ.
ಕೇವಲ ತಂದೆ ತಾಯಿ ಮಾತ್ರವಲ್ಲ, ಸರ್ಕಾರಿ ಶಾಲೆಯ ಗೌರವವನ್ನು ಎತ್ತಿ ಹಿಡಿದ ನಿಜಗುಣೇಶನ ವಿದ್ಯಾವಂತಿಕೆಗೆ ಇಡೀ ಗ್ರಾಮ, ತಾಯಿ ಕರ್ತವ್ಯ ನಿರ್ವಹಿಸುವ ಸಿಡಿಪಿಓ ಇಲಾಖೆ ತಂದೆಯ ಪ್ರೋತ್ಸಾಹ ಮರೆಯುವಂತಿಲ್ಲ ಎನ್ನುತ್ತಾರೆ ಕುಟುಂಬಸ್ಥರು, ಈ ಬಗ್ಗೆ ಶಿಕ್ಷಕರ ಅಭಿಪ್ರಾಯವೇನು ಕೇಳ್ಬಿಡಿ.
ಕೇಳಿದ್ರಲ್ಲಾ ಸತತ ಪರಿಶ್ರಮದ ಹಿಂದೆ ಸಾಧನೆ, ಕಷ್ಟಗಳು ಹಿಂದೆ ಸುಖ ಇರುತ್ತೆ ಎಂಬ ಮಾತಿಗೆ ಈ ಯುವಕನ ಸಕ್ಸಸ್ ಸ್ಟೋರಿ ಇತರರಿಗೆ ಪ್ರೇರಣೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
08/01/2021 04:26 pm