ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೋಮ್ ವರ್ಕ್ ತೋರಿಸಲು ಅಂಗವಿಕಲ ತಾಯಿಯೊಂದಿಗೆ 35 ಕಿಲೋ ಮೀಟರ್ ಪ್ರಯಾಣಿಸಿದ ಬಾಲಕ

ಹುಬ್ಬಳ್ಳಿ: ಆತ ಎರಡನೇ ತರಗತಿಯಲ್ಲಿ ಓದುತ್ತಿರುವ ಬಾಲಕ.ತಾನು ಮಾಡಿದ ಹೋಮ್ ವರ್ಕ್ ಶಿಕ್ಷಕರಿಗೆ ತೋರಿಸಲು ಅಂಗವಿಕಲ ತಾಯಿಯನ್ನು ಕರೆದುಕೊಂಡು ಹಳ್ಳಿಯಿಂದ ನಗರದಕ್ಕೆ 35 ಕಿಲೋ ಮೀಟರ್ ಪ್ರಯಾಣಿಸಿ ಹೋಮ್ ವರ್ಕ್ ತೋರಿಸಿದ್ದಾ‌ನೆ.

ಕುಂದಗೋಳ ತಾಲೂಕಿನ ಯರೇಬೂದಿಹಾಳದ ಪವನ ಕಂಠಿ ಎಂಬುವಂತ ವಿದ್ಯಾರ್ಥಿ ಮನೆಯಲ್ಲಿ ತಾನು ಮಾಡಿದ ಹೋಮ್ ವರ್ಕ್ ತೋರಿಸಲು ಹುಬ್ಬಳ್ಳಿಯಲ್ಲಿರುವ ಶಿಕ್ಷಕರ ಮನೆಗೆ ಬಂದಿದ್ದು,ಹೋಮ್ ವರ್ಕ್ ತೋರಿಸಿ ಸೈ ಎನಿಸಿಕೊಂಡಿದ್ದಾನೆ.ಈ ಬಾಲಕ ಸಾಯಿನಗರದ ಕಲ್ಲಪ್ಪ ನಾಗಪ್ಪ ಕೊಕಾಟಿ ವಸತಿ ಶಾಲೆಯಲ್ಲಿ ಓದುತ್ತಿದ್ದು,ಈಗ ಶಾಲೆಗಳು ರಜೆ ಇರುವ ಕಾರಣ ಮನೆಯಲ್ಲಿ ಹೋಮ್ ವರ್ಕ್ ಮಾಡಿದ್ದು,ಅದನ್ನು ತೋರಿಸಲು ತಾಯಿಯೊಂದಿದೆ ಹಠ ಹಿಡಿದು ಕಡೆಗೂ ಅಂಗವಿಕಲ ತಾಯಿಯೊಂದಿಗೆ ಹುಬ್ಬಳ್ಳಿಗೆ ಆಗಮಿಸಿ ಶಿಕ್ಷಕಿ ಅನಸೂಯಾ ಸಜ್ಜನ ಅವರಿಗೆ ತೋರಿಸಿದ್ದಾನೆ.

ಲಾಕ್ ಡೌನ್ ಘೋಷಣೆ ಸಂದರ್ಭದಲ್ಲಿ ಶಾಲೆಗಳು ಬಂದ್ ಆಗಿದ್ದವು ಈ ಸಂದರ್ಭದಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಮನೆಗೆ ಹೋಗಿದ್ದಾನೆ.ಹೋಗುವ ಸಂದರ್ಭದಲ್ಲಿ ಮನೆಯಲ್ಲಿ ಮಾಡಲು ಹೋಮ್ ವರ್ಕ್ ಕೊಟ್ಟಿದ್ದು,ಶಿಕ್ಷಕರು ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದು,ಅದನ್ನು ತೋರಿಸಲು ತಾಯಿಯೊಂದಿಗೆ 35 ಕಿಲೋ ಮೀಟರ್ ಪ್ರಯಾಣಿಸಿ ಹುಬ್ಬಳ್ಳಿಗೆ ಬಂದು ಶಿಕ್ಷಕರಿಗೆ ತನ್ನ ಹೋಮ್ ವರ್ಕ್ ತೋರಿಸಿದ್ದಾನೆ.

Edited By : Manjunath H D
Kshetra Samachara

Kshetra Samachara

31/10/2020 11:43 am

Cinque Terre

40.98 K

Cinque Terre

23

ಸಂಬಂಧಿತ ಸುದ್ದಿ