ಹುಬ್ಬಳ್ಳಿ- ಅದು ನಗರದ ಪ್ರತಿಷ್ಠಿತ ಮಾರುಕಟ್ಟೆ, ಪ್ರದೇಶ ಪ್ರತಿದಿನ ಸಾವಿರಾರು ವಾಹನಗಳು ಅಲ್ಲಿ ಸಂಚಾರ ಮಾಡುತ್ತವೆ. ಆದರೆ ಕೇಲ ದಿನಗಳ ಹಿಂದೆ ಅಲ್ಲೊಂದು ಅವಘಡ ನಡೆದು ಹೋಗಿತ್ತು. ಮುದ್ದಾದ ಮಗುವಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ, ಮಗು ಸಾವು ಬದುಕಿನ ನಡುವಿನ ಹೋರಾಟ ನಡುಸುವ ಸ್ಥಿತಿಗೆ ಬಂದಿತ್ತು. ಆದರೆ ತಕ್ಷಣ ಆ ಮಗುವಿಗೆ ದೇವರಂತೆ ಬಂದವರು ಶಾ ಬಜಾರ್ ವ್ಯಾಪಾರಸ್ಥರು
ಕೇಲ ದಿನಗಳ ಹಿಂದೆ ಶಾ ಬಜಾರ್ ಎದುರುಗಡೆ ಒಂದು ಅಪರಿಚಿತ ವಾಹನವೊಂದು ಮಗುವಿಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಗಂಭೀರವಾಗಿ ಗಾಯಗೊಂಡಿತ್ತು. ಅಲ್ಲಿ ಆ ಮಗುವಿನ ತಾಯಿ ಸಹ ಇದ್ದಳು. ಆದರೆ ಅವರಿಗೆ ಆಸರೆಯಾದರು ಶಾ ಬಜಾರ್ ವ್ಯಾಪಾರಸ್ಥರು. ಮೊದಲೇ ಕರೋನಾದಿಂದಾಗಿ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ಈ ನಡುವೆಯೂ ಶಾ ಬಜಾರ್ ಸಮಿತಿಯು ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಅದನ್ನು ಆಡಳಿತವು ಮೆಚ್ಚಿದೆ. ಇಡೀ ಶಾ ಬಜಾರ್ ವ್ಯಾಪಾರಸ್ಥರು ಮೊದಲು 20000 ಸಾವಿರ ದೇಣಿಗೆ ಸಂಗ್ರಹಿಸಿ, ಆಸ್ಪತ್ರೆಯ ಖರ್ಚು ವೆಚ್ಚದ ಜೊತೆಗೆ ಹಣಕಾಸು ಸಹಾಯ ಸಹ ಮಾಡಿದ್ದಾರೆ. ಬಾಲಾಜಿ ಆಸ್ಪತ್ರೆಗೆ 1.50 ಲಕ್ಷ ರೂಪಾಯಿ ಯ ಖರ್ಚು ವೆಚ್ಚ ಭರಿಸಿ, ನಂತರ ಡಿಸೆಂಬರ್ 14 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಅಷ್ಟೇ ಅಲ್ಲ, ಡಿಸ್ಚಾರ್ಜ್ ಮಾಡಿದ ನಂತರವೂ ಅವರ ಹೆತ್ತವರಿಗೆ ಸುಮಾರು 16,000 ಶಾ ಬಜಾರ್ ಸಮಿತಿಯ ಸದಸ್ಯರು ಸಹಾಯ ಮಾಡಿದ್ದಾರೆ...
ಮೊದಲೇ ಜಾತಿ, ಧರ್ಮ, ಭಾಷೆಯ ವಿಚಾರದಲ್ಲಿ ಮನಸ್ಸುಗಳು ಒಡೆದು ಹೋಗಿವೆ ಹೋಗುತ್ತಿವೆ. ಇಂತಹ ಸಂದರ್ಭಗಳಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿ ಖರ್ಚು ವೆಚ್ಚ ಕೊಡುವುದರ ಜೊತೆಗೆ, ಸ್ವತಃ ಇಲ್ಲಿನ ವ್ಯಾಪಾರಿಗಳೆ ನಿಂತು ಆರೋಗ್ಯ ನೋಡಿಕೊಂಡಿದ್ದಾರೆ.
ಮಾನವೀಯತೆಯ ಶ್ರೇಷ್ಠ ಧರ್ಮವಾಗಿದ್ದು. ಒಬ್ಬ ವ್ಯಕ್ತಿಯು ತೊಂದರೆಗೆ ಸಿಲುಕಿದರೆ, ಉಳಿದವರೆಲ್ಲರೂ ಮಾನವೀಯತೆಗಾಗಿ ಅವನ ಸಹಾಯಕ್ಕೆ ಬರುತ್ತಾರೆ. ಧರ್ಮ ಮತ್ತು ರಾಷ್ಟ್ರಕ್ಕಿಂತ ದೊಡ್ಡದು ಯಾವುದು ಇಲ್ಲಾ. ಮೊದಲು ಮಾನವೀಯತೆಗೆ ಆದ್ಯತೆ ನೀಡಿದ ಶಾ ಬಜಾರ ಎಲ್ಲ ಸದಸ್ಯರಿಗೆ ಹ್ಯಾಟ್ಸ್ ಅಪ್ ಹೇಳಲೇಬೇಕು....
Kshetra Samachara
22/12/2020 12:38 pm