ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಿಂದ ನಿರ್ಗಮಿಸಿದ ಸೈಕಲ್ ಜಾಥಾ

ಧಾರವಾಡ: ಕೊಲ್ಲಾಪುರದ ಜೈನತೀರ್ಥ ಕ್ಷೇತ್ರದಿಂದ ಕನ್ಯಾಕುಮಾರಿವರೆಗೆ ಹೊರಟಿರುವ 80 ಮಂದಿ ಜೈನ ಯುವಕರು ಶಾಂತಿ ಸದ್ಭಾವನಾ ಸೈಕಲ್ ಜಾಥಾ ಇಂದು ಧಾರವಾಡಕ್ಕೆ ಆಗಮಿಸಿತು.

ಈ ಜಾಥಾವನ್ನು ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು. ಅಹಿಂಸೆ, ಸಸ್ಯಹಾರ, ವ್ಯಸನಮುಕ್ತ ಜೀವನ, ಪರಿಸರ ರಕ್ಷಣೆ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ಮಾತೃಭಾಷೆಯಲ್ಲಿ ವಿದ್ಯಾಭ್ಯಾಸ ಮುಂತಾದ ಧ್ಯೇಯವನ್ನಿಟ್ಟುಕೊಂಡು ನಡೆಯುತ್ತಿರುವ ಈ ಜಾಥಾ ಕೊಲ್ಲಾಪುರದಿಂದ ಆಗಮಿಸಿ ಧಾರವಾಡ ಮಾರ್ಗವಾಗಿ ಕನ್ಯಾಕುಮಾರಿಯತ್ತ ಹೊರಟಿದೆ.

ಈ ಹಿನ್ನೆಲೆಯಲ್ಲಿ ಧಾರವಾಡ ಕಲಾಭವನ ಆವರಣದಲ್ಲಿ ಸೈಕಲ್ ಜಾಥಾ ಯುವಕರನ್ನು ಧಾರವಾಡ ಜೈನ್ ಸಮಾಜದ ವತಿಯಿಂದ ಸ್ವಾಗತಿಸಿಕೊಂಡು, ಮುಂದೆ ಬೀಳ್ಕೊಡಲಾಯಿತು.

Edited By :
Kshetra Samachara

Kshetra Samachara

18/12/2020 09:09 pm

Cinque Terre

31.55 K

Cinque Terre

2

ಸಂಬಂಧಿತ ಸುದ್ದಿ