ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಸಿಡಿ ಮದ್ದು ತಿಂದ ಎತ್ತು ಜೀವನ‌ಮರಣದ ಸಂಘರ್ಷ

ಕಲಘಟಗಿ:ಪಟ್ಟಣದ ವ್ಯಾಪ್ತಿಯ ಹುಲಗಿನಕಟ್ಟಿ ಗ್ರಾಮದಲ್ಲಿ ಎತ್ತು ಸಿಡಿ ಮದ್ದು ತಿಂದು ಜೀವನ‌ಮರಣದ ಸಂಘರ್ಷ ಮಾಡುತ್ತಿರುವ ಘಟನೆ ಗುರುವಾರ ಜರುಗಿದೆ.

ಗ್ರಾಮದ ಮಹಾದೇವಪ್ಪ ತಿಪ್ಪಣ್ಣ ಸಪೂರಿ ಎಂಬುವರಿಗೆ ಸೇರಿದ ಎತ್ತು ಇದಾಗಿದೆ.ಎತ್ತು ಗ್ರಾಮದ ಹೊರವಲಯದಲ್ಲಿ ಮೇಯಿಸಲು ಹೋದಾಗ ದುರ್ಘಟನೆ ಜರುಗಿದೆ ‌ಎತ್ತು ಸಿಡಿ ಮದ್ದು ತಿಂದ ಪರಿಣಾಮ ಬಾಯಿಯಲ್ಲಿಯೇ ಸ್ಪೋಟವಾಗಿದೆ.ಎತ್ತಿನ ಬಾಯಿ ರಕ್ತ ಸಿಕ್ತವಾಗಿದ್ದು ಮನಕಲಕುಂವತ್ತಿದೆ

ಸಿಡಿ ಮದ್ದನ್ನು ಕಾಡು ಮೃಗಗಳಿಗೆ ಇಟ್ಟಿರ ಬಹುದಾಗಿದೆ ಎನ್ನಲಾಗಿದೆ.ಬಡ ರೈತನ ಕಿಮ್ಮತ್ತಿ ಎತ್ತು ಜೀವನ‌ಮರಣ ಸಂಘರ್ಷದಲ್ಲಿ‌ದೆ.ಗ್ರಾಮ ಲೆಕ್ಕಾಧಿಕಾರಿ ಕುಮಾರ ‌ಮುದಕ್ಕಣ್ಣವರ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

Edited By : Manjunath H D
Kshetra Samachara

Kshetra Samachara

10/12/2020 07:36 pm

Cinque Terre

58.82 K

Cinque Terre

12

ಸಂಬಂಧಿತ ಸುದ್ದಿ