ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕೊರೊನಾ ರಜೆಗೆ ಕೆರೆಯಲ್ಲಿ ಮಕ್ಕಳ ಈಜಿನ ಮಜಾ

ಕಲಘಟಗಿ : ಕೊರೊನಾ ರಜೆಯ ನಡುವೆ ಪಟ್ಟಣದಲ್ಲಿ ಮಕ್ಕಳು ಕೆರೆಯಲ್ಲಿ ಈಜಿನ ಮಜಾ ಅನುಭವಿಸುತ್ತಿದ್ದಾರೆ.

ಕೊರೊನಾದಿಂದ ಶಾಲೆಗಳಿಗೆ ರಜೆ ಇದ್ದು, ಇದರ ಸದುಪಯೋಗಕ್ಕೆ ಮುಂದಾಗಿರುವ ಮಕ್ಕಳು ಪಟ್ಟಣದ ಮೃತ್ಯುಂಜಯ ಕೆರೆಯಲ್ಲಿ ಈಜು ಕಲಿಯುವ ಮೂಲಕ ರಜೆಯನ್ನು ಖುಷಿಯಿಂದ ಅನುಭವಿಸುತ್ತಿದ್ದಾರೆ.

ಬೆಳಿಗ್ಗೆ ಕೊರೆವ ಚಳಿಯಲ್ಲಿ ಕೆರೆಗೆ ಇಳಿಯುವ ಮಕ್ಕಳು,ವಿದ್ಯಾರ್ಥಿಗಳು ಈಜು ಕಲಿಯುತ್ತಿದ್ದಾರೆ.ಮಾಜಿ ಸೈನಿಕರಾದ ಮಹಾದೇವಪ್ಪ ತಡಸ, ಡಾ ಸುರೇಶ ಕಳಸಣ್ಣವರ,ಪರಶುರಾಮ ಹುಲಿಹೊಂಡ,ಕಿರಣ ಅಳಗವಾಡಿ,ಅಶೋಕ ಗೊಂದಿ,ಶಿಕ್ಷಕರಾದ ಬಾಳಪ್ಪನವರ ಮಾರ್ಗದರ್ಶನಲ್ಲಿ ಈಜು ಕಲಿಯುತ್ತಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಮಕ್ಕಳು ವಾರದಲ್ಲಿಯೇ ಈಜು ಕಲಿತು ರಜೆಯ ಸದುಪಯೋಗ ಪಡಿಸಿ ಕೊಳ್ಳುವುದರೊಂದಿಗೆ ಸದೃಢವಾದ ಆರೋಗ್ಯವನ್ನು ಹೊಂದುತ್ತಿದ್ದಾರೆ.

ವರದಿ: ಮಲ್ಲಿಕಾರ್ಜುನ ಪುರದನಗೌಡರ,ಪಬ್ಲಿಕ್ ನೆಕ್ಸ್ಟ್,ಕಲಘಟಗಿ

Edited By : Manjunath H D
Kshetra Samachara

Kshetra Samachara

09/12/2020 11:08 am

Cinque Terre

75.59 K

Cinque Terre

4

ಸಂಬಂಧಿತ ಸುದ್ದಿ