ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬ್ಯಾರಿಕೆಡ್ ನಲ್ಲಿ ಸಿಲುಕಿಕೊಂಡ ಬೈಕ್ ಸವಾರ: ಸಾಹಸ‌ ಮಾಡಲು ಹೋಗಿ ಸಮಸ್ಯೆ ಮಾಡಿಕೊಂಡ

ಹುಬ್ಬಳ್ಳಿ: ನಮ್ಮ ಜನ ಹಸ್ತ ಕೊಟ್ಟರೇ ದೇಹವನ್ನೇ ನುಂಗಬಹುದು ಎಂಬುವಂತ ನಾಣುಡಿಯನ್ನು ಸತ್ಯ ಮಾಡಲು ಹೋಗಿ ಸಾಕಷ್ಟು ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ.ಸ್ವಲ್ಪ ಸ್ಥಳಾವಕಾಶ ಸಿಕ್ಕರೇ ಸಾಕು ಎಂದುಕೊಂಡು ಎಲ್ಲೆಂದರಲ್ಲಿ ಬರುವ ವಾಹನ ಸವಾರರು ಒಂದು ನಿಮಿಷ ಉಳಿಸಲು ಹೋಗಿ ಗಂಟೆಗಟ್ಟಲೆ ಪರದಾಡುವದಂತೂ ಖಂಡಿತ ಅಂತಹದ್ದೇ ಒಂದು ಘಟನೆ ಹುಬ್ಬಳ್ಳಿ ಕೇಂದ್ರಿಯ ಬಸ್ ನಿಲ್ದಾಣದ ಹತ್ತಿರ ನಡೆದಿದೆ.

ಟ್ರಾಫಿಕ್ ನಿಯಂತ್ರಣಕ್ಕೆ ಬ್ಯಾರಿಕೆಡ್ ಹಾಕಲಾಗಿದ್ದು,ಇಲ್ಲೊಬ್ಬ ಬೈಕ್ ಸವಾರ ಬ್ಯಾರಿಕೆಡ್ ಮೂಲಕ ಹಾದು ಹೋಗುವ ಹರಸಾಹಸಕ್ಕೆ ಮುಂದಾಗಿದ್ದಾನೆ.ಆದರೇ ಅಲ್ಲಿ ಪಾರಾಗಲು ಆಗದೇ ಮಧ್ಯೆದಲ್ಲಿಯೇ ಸಿಲುಕಿಕೊಂಡಿದ್ದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಮಾಧ್ಯಮಕ್ಕೆ ನೀಡಿದ್ದಾರೆ.

ಬಿ.ಆರ್.ಟಿ.ಎಸ್. ಬಸ್ ಗಾಗಿ ಕಾರಿಡಾರ್ ಹಾಗೂ ಬ್ಯಾರಿಕೆಡ್ ಹಾಕಲಾಗಿದೆ.ಆದರೇ ಇಂದು ಭಾರತ ಬಂದ್ ವೇಳೆಯಲ್ಲಿ ಟ್ರಾಫಿಕ್ ಕೂಡ ಕಡಿಮೆ ಇದೆ ಆದರೇ ಇಂತಹ ಸಂದರ್ಭದಲ್ಲಿಯೇ ಹರಸಾಹಸಕ್ಕೆ ಕೈ ಹಾಕಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.

Edited By : Manjunath H D
Kshetra Samachara

Kshetra Samachara

08/12/2020 06:10 pm

Cinque Terre

50.75 K

Cinque Terre

4

ಸಂಬಂಧಿತ ಸುದ್ದಿ