ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಾವಿನಲ್ಲೂ ಒಂದಾದ ಸತಿ-ಪತಿ

ಧಾರವಾಡ: ತುಂಬು ಜೀವನ ನಡೆಸಿದ ಸತಿ-ಪತಿಗಳಿಬ್ಬರು ಸಾವಿನಲ್ಲೂ ಒಂದಾಗುವ ಮೂಲಕ ತಮ್ಮ ಜೀವನದಲ್ಲಿ ಸಾರ್ಥಕತೆ ಮೆರೆದಿದ್ದಾರೆ.

ಹೀಗೆ ಅಕ್ಕಪಕ್ಕವೇ ಕುಳಿತು ಕೊನೆಯ ಅಂತಿಮ ಯಾತ್ರೆ ನಡೆಸುತ್ತಿರುವ ಸತಿ ಪತಿಯ ಹೆಸರು ಚನ್ನಬಸನಗೌಡ ದ್ಯಾಮನಗೌಡರ ವಯಸ್ಸು 80 ಹಾಗೂ ನೀಲವ್ವ ದ್ಯಾಮನಗೌಡರ ವಯಸ್ಸು 75. ಇವರು ನವಲಗುಂದ ತಾಲೂಕಿನ ನಾಗರಳ್ಳಿ ಗ್ರಾಮದವರು.

ಚನ್ನಬಸನಗೌಡನಿಗೆ ಹುಷಾರಿಲ್ಲದ ಕಾರಣ ಹಾಸಿಗೆ ಹಿಡಿದಿದ್ರಂತೆ. ಇವರ ಆರೈಕೆ ಮಾಡುತ್ತಿದ್ದ ಧರ್ಮಪತ್ನಿ ನೀಲವ್ವ ನಿನ್ನೆ ಹೃದಯಾಘಾತದಿಂದ ನಿಧನರಾದ್ರು. ಈ ವಿಷಯ ತಿಳಿದ ಚನ್ನಬಸನಗೌಡ ಪತ್ನಿ ಕಣ್ಮುಚ್ಚಿದ ಕೇವಲ ನಾಲ್ಕು ಗಂಟೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಇಬ್ಬರೂ ಸಾವಿನಲ್ಲಿ ಒಂದಾದ ಸುದ್ದಿ ಗೊತ್ತಾದ ಕೂಡಲೇ ಇಡೀ ಗ್ರಾಮದ ಜನ ಸೇರಿಕೊಂಡು ಸತಿ-ಪತಿಯನ್ನು ಮೆರವಣಿಗೆ ಮಾಡಿ ಒಂದೇ ಕಡೆ ಅವರ ಅಂತಿಮ ಸಂಸ್ಕಾರ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

07/12/2020 12:08 pm

Cinque Terre

49.52 K

Cinque Terre

2

ಸಂಬಂಧಿತ ಸುದ್ದಿ