ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ವೃತ್ತಿ ರಂಗಭೂಮಿಗೆ "ಕಾಯಕಲ್ಪ ಯೋಜನೆ" ಅಡಿ ಸರಕಾರ ನೆರವು ನೀಡವುದೇ ?

ಕಲಘಟಗಿ:ವೃತ್ತಿ ರಂಗಭೂಮಿ ನೆಲಕ್ಕಚ್ಚಿದ್ದು,ನಾಟಕ ‌ಕಂಪನಿಗಳು ಸಂಕಷ್ಟದಲ್ಲಿ ಇವೆ.ಇಂತಹ ಸಮಯದಲ್ಲಿ "‌ವೃತ್ತಿ ರಂಗಭೂಮಿ ಕಾಯಕಲ್ಪ ಯೋಜನೆ" ಅಡಿ ಸರಕಾರ ನೆರವು ನೀಡವುದೇ ? ಎಂಬುದನ್ನು ನಾಟಕ ಕಂಪನಿಗಳು ಜಾತಕ

ಪಕ್ಷಿಗಳಂತೆ ಕಾಯದ್ದು ಕುಳಿತಿವೆ.

ರಾಜ್ಯದಲ್ಲಿ ಸುಮಾರು 32 ವೃತ್ತಿರಂಗಭೂಮಿ ಕಂಪನಿಗಳು ಇವೆ.ಇವುಗಳಲ್ಲಿ 6 ಕಂಪನಿಗಳಿಗೆ ವೃತ್ತಿ ರಂಗಭೂಮಿ ಕಾಯಕಲ್ಪ ಯೋಜನೆಯ ಸಹಾಯ ಈ ವರಗೆ ದೊರೆಯುತ್ತಿಲ್ಲ.

ಕೊರೋನಾ ಮಹಾಮಾರಿಗೆ ಸಿಲುಕಿದ‌ ರಂಗಭೂಮಿ‌ ಇಂದು ಸರಕಾರದ ನೆರವಿಗಾಗಿ ಕಾಯದ್ದು ಕುಳಿತುಕೊಳ್ಳ ಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಇದೆ.ಜಗಜ್ಯೋತಿ ಬಸವೇಶ್ವರ,ಅಮೋಘ ವರ್ಷನೃಪತುಂಗ,ನಾಗಲಿಂಗಲೀಲೆ,ಕೃರ್ತ ಶ್ರಿ ಜಗದ್ಗುರು ಶಿರಹಟ್ಟಿ ಫಕ್ಕೀರೇಶ್ವರ ಮಹಾತ್ಮೆ ಯಂತಹ ಮೌಲಿಕ ಹಾಗೂ ಸಾಮಾಜಿಕ ‌ನಾಟಕಗನ್ನು ಹಲವಾರು ವರ್ಷಗಳಿಂದ ಸರಕಾರದ ನೆರವಿಲ್ಲದೇ ಪ್ರದರ್ಶನ ಮಾಡುತ್ತಾ ಬಂದ ನಾಟಕ ಕಂಪನಿಗಳು ಸರಕಾರದ ವಾರ್ಷಿಕ ಅನುದಾನದಿಂದ ವಂಚಿತವಾಗಿವೆ.

ವೃತ್ತಿರಂಗಭೂಮಿ ಅತ್ಯಂತ ನಷ್ಟದಿಂದ ನಾಟಕ ಸಂಸ್ಥೆ ನಡೆಸುತ್ತಿದೆ.ಸಂಕಷ್ಟದ ಇಂತಹ ಪರಿಸ್ಥಿತಿಯಲ್ಲಿ ಸರಕಾರ

ವೃತ್ತಿರಂಗಭೂಮಿ ಕಾಯಕಲ್ಪ ಯೋಜನೆ ಅಡಿ ನಾಟಕ‌‌‌ ಸಂಘಗಳನ್ನು ಪರಿಗಣಿಸಿ ವಾರ್ಷಿಕ ಅನುದಾನ ‌ನೀಡ ಬೇಕು ಎಂದು ವಿಶ್ವ ಭಾರತಿ ರಮ್ಯ ನಾಟಕ ಸಂಘದ ಮಾಲೀಕರಾದ ಬಸವರಾಜ ಬೆಂಗೇರಿ ಪಬ್ಲಿಕ್ ನೆಕ್ಸ್ಟ್ ಮೂಲಕ ಸರಕಾರವನ್ನು ವಿನಂತಿಸಿದರು.

ಕೊರೋನಾ ಹಾಗೂ ‌ಲಾಕ್ ಡೌನ್ ಕಾರಣ‌‌ ಎಂಟು ತಿಂಗಳುಗಳಿಂದ ಪ್ರದರ್ಶನವಿಲ್ಲದೆ ಕಲಾವಿದರು ತೊಂದರೆಯಲ್ಲಿ‌ ಇದ್ದಾರೆ.ಪ್ರೇಕ್ಷಕರ‌ ಬದಲಾದ ಅಭಿರುಚಿ ಹಾಗೂ ಕೊರೋನಾ ಮಹಾಮಾರಿಯಿಂದ ರಂಗಭೂಮಿ ಸೊರಗಿ ನೆಲಕ್ಕಚ್ಚಿದೆ.ರಂಗ ಕಲಾವಿದರ ಬದುಕು ಬಹಳಷ್ಟು ಸಂಕಷ್ಟದಲ್ಲಿ ಇದ್ದು,ಸರಕಾರ ರಂಗಭೂಮಿಯ ಉಳಿವಿಗಾಗಿ ಕಾಯಕಲ್ಪ ಯೋಜನೆ ಅಡಿಯಲ್ಲಿ ವಾರ್ಷಿಕ ನೆರವು ನೀಡುವುದೇ ಎಂಬುದನ್ನ ಕಾದು ನೋಡ ಬೇಕಿದೆ.(ಮಲ್ಲಿಕಾರ್ಜುನ ಪುರದನಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ)

Edited By :
Kshetra Samachara

Kshetra Samachara

06/12/2020 12:56 pm

Cinque Terre

59.07 K

Cinque Terre

0

ಸಂಬಂಧಿತ ಸುದ್ದಿ