ವರದಿ: ಮಲ್ಲಿಕಾರ್ಜುನ ಪುರದನಗೌಡರ
ಕಲಘಟಗಿ:ಬದುಕಿನಲ್ಲಿ ಮನುಷ್ಯರು ಪರಿಪೂರ್ಣವಾಗಬೇಕಾದರೆ ಕಣ್ಣು ಇರಬೇಕು ಆದರೆ ಪ್ರಕೃತಿಯ ಅನ್ಯಾಯದಿಂದ ಕಣ್ಣು ಕಳೆದುಕೊಂಡ ಹುಟ್ಟಿದರು,ಕಣ್ಣು ಇಲ್ಲದ ಕೊರತೆಯನ್ನೇ ಶಕ್ತಿಯನ್ನಾಗಿ ಮಾಡಿ ಸಂಗೀತ ಕಲೆಯ ಮೂಲಕ ಸ್ವಾವಲಂಬಿ ಬದುಕು ಸಾಗಿಸುವ ಅಂಧರಿವರು.
ಕಲಘಟಗಿ ಪಟ್ಟಣಕ್ಕೆ ಆಗಮಿಸಿದ್ದ,ಅಂಧ ಕಲಾವಿದರು ರಸ್ತೆ ಬದಿಯಲ್ಲಿ ನೀಡಿದ ಸಂಗೀತ ಸಂಜೆ ಕಾರ್ಯಕ್ರಮ ಜನಮನ ಸೆಳೆಯಿತು.
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಡೆದ ಅಂಧರ ಸಂಗೀತ ಕಾರ್ಯಕ್ರಮವನ್ನು ಜನರು ವೀಕ್ಷಿಸಿ ಸಹಾಯ ಹಸ್ತ ಚಾಚಿದರು.
ಗದಗನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಅಭ್ಯಾಸ ಮಾಡಿರುವ ಕಲಾವಿದರು ಯಾರ ಮೇಲೆಯೂ ಅವಲಂಬನೆಯಾಗದೇ ಸಂಗೀತ ಹಾಗೂ ಹಾಡಿನ ಮೂಲಕ ಸ್ವಾವಲಂಬಿ ಬದುಕು ಕಂಡುಕೊಂಡಿರುವದು ಮಾದರಿಯಾಗಿದೆ.
ಅಂಧರ ಕಲಾ ಸಂಘಗಳಿಗೆ ಸರಕಾರ ಸಹಾಯ ಹಸ್ತ ನೀಡ ಬೇಕು ಎಂದು ಕಲಾವಿದರಾದ ಚಂದ್ರ ಡಿ ಎಸ್ ಪಬ್ಲಿಕ್ ನೆಕ್ಸ್ಟ್ ಮೂಲಕ ವಿನಂತಿಸಿದರು.
ಸರಕಾರದ ಯಾವುದೇ ಅನುದಾನವಿಲ್ಲದೇ ಅಂಧ ಮಕ್ಕಳಿಗೆ ವಿದ್ಯಾಭ್ಯಾಸ,ಅವರಿಗೆ ಕಲೆಯ ತರಬೇತಿ ನೀಡುವ ಉದ್ದೇಶದಿಂದ ಭದ್ರವತಿಯಲ್ಲಿ ಸಹ್ಯಾದ್ರಿ ಅಂಧರ ಕಲಾ ಸಂಘ ಕಟ್ಟಿಕೊಂಡಿರುವ ಚಂದ್ರು ಡಿ ಎಸ್ ಇವರ ಸಾರಥ್ಯದಲ್ಲಿ,ಮುಸ್ತಫ ಕೆ ಬಿ,ಮಂಗಳಾ,ನಂದೀಶ,ಬೀಮಸೇನ,ಈಶ್ವರ,ನಾಗರಾಜ ರಾಜ್ಯಾದ್ಯಂತ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಅಂಧ ಕಲಾವಿದರಿಗೆ ಸರಕಾರ ಸಹಾಯ ನೀಡಬೇಕಿದೆ.
Kshetra Samachara
06/12/2020 10:17 am