ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಚಿತ್ರಮಂದಿರಗಳ ಮಾಲೀಕರಿಗೆ ಆಸರೆಯಾಗುತ್ತಾ ಸರ್ಕಾರ..?

ಪಬ್ಲಿಕ್ ನೆಕ್ಸ್ಟ್ ವಿಶೇಷ : ವಿನೋದ ಇಚ್ಚಂಗಿ

ನವಲಗುಂದ : ಮನರಂಜನೆ ಅಂದ್ರೆ ಅದಕ್ಕೆ ಇನ್ನೊಂದು ಹೆಸರು ಚಲನಚಿತ್ರಗಳು ಎನ್ನಬಹುದು, ತಮ್ಮ ನೆಚ್ಚಿನ ನಾಯಕ ನಟನ ಚಿತ್ರವನ್ನು ನೋಡಲು ಸಿನಿ ಪ್ರೇಮಿಗಳು ಚಿತ್ರಮಂದಿರಗಳಿಗೆ ಮುಗಿ ಬೀಳ್ತಾರೆ, ಆದ್ರೆ ಈ ಬಾರಿ ಕೊರೋನಾ ವೈರಸ್ ನಿಂದಾಗಿ ಎಲ್ಲರಿಗೂ ಪೆಟ್ಟು ಕೊಟ್ಟಂತಾಗಿದೆ.

ಅಷ್ಟೇ ಅಲ್ಲದೇ ಸರ್ಕಾರ ಚಿತ್ರಮಂದಿರಗಳಿಗೆ ಗ್ರೀನ್ ಸಿಗ್ನೆಲ್ ಕೊಟ್ಟರು ಸಹ ರಾಜ್ಯದಲ್ಲಿ ಬೆರಳೆಣಿಕೆಯ ಥಿಯೇಟರ್ ಗಳಷ್ಟೇ ತೆರೆದಿವೆ ಅದು ಯಾಕೆ ಅಂತೀರಾ ನಾವು ಹೇಳ್ತಿವಿ ಕೇಳಿ...

ಚಿತ್ರಮಂದಿರಗಳ ಮಾಲೀಕರಿಗಿರುವ ಸಮಸ್ಯೆಗಳೇ ಈಗಾ ಚಿತ್ರಮಂದಿರಗಳು ತೆರೆಯದಿರಲು ಪ್ರಮುಖ ಕಾರಣ, ಸರ್ಕಾರ ಚಿತ್ರಮಂದಿರಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ ನಿಜಾ ಆದ್ರೆ ಕೇವಲ 50% ಆಸನಕ್ಕೆ ಮಾತ್ರ ಅವಕಾಶ ನೀಡಿದೆ.

ಈ ರೀತಿಯಾದಲ್ಲಿ ತಾಲೂಕುಗಳಲ್ಲಿರುವ ಚಿತ್ರಮಂದಿರಗಳನ್ನು ನಡಿಸೋದು ಹೇಗೆ ಅನ್ನೋದು ಮಾಲೀಕರ ಪ್ರಶ್ನೆಯಾಗಿದೆ. ಇನ್ನೂ ಕಳೆದ 8-9 ತಿಂಗಳಿನಿಂದ ಚಿತ್ರಮಂದಿರಗಳು ಮುಚ್ಚಿದ್ದವು, ಈ ಸಮಯದಲ್ಲಿನ ತೆರಿಗೆ ಮತ್ತು ಕೆಇಬಿ ಬಿಲ್ ಕಟ್ಟುವುದು ತುಂಬಾ ಕಷ್ಟ ಇವುಗಳನ್ನು ಮನ್ನಾ ಮಾಡಬೇಕು ಎಂಬುದು ಚಿತ್ರಮಂದಿರಗಳ ಮಾಲೀಕರ ಮನವಿ, ಇಂತಹ ಇನ್ನೂ ಅನೇಕ ಸಮಸ್ಯೆಗಳ ಬಗ್ಗೆ ಈಗಾಗಲೇ ಚಿತ್ರಮಂದಿರಗಳ ಮಾಲೀಕರು ಸರ್ಕಾರದ ಗಮನಕ್ಕೂ ತಂದಿದ್ದಾರಂತೆ ಆದರೆ ಏನೂ ಪ್ರಯೋಜನವಾಗಿಲ್ಲಾ, ಇನ್ನೂ ಈ ಬಗ್ಗೆ ನವಲಗುಂದದ ಸಿದ್ದಲಿಂಗೇಶ್ವರ ಚಿತ್ರಮಂದಿರದ ಮಾಲೀಕರಾದ ಜಯಣ್ಣಾ ಹೇಳಿದ್ದು ಹೀಗೆ...

ಇನ್ನೂ ನವಲಗುಂದದಲ್ಲಿರುವ ಸಿದ್ದಲಿಂಗೇಶ್ವರ ಚಿತ್ರಮಂದಿರಕ್ಕೆ ಬಂದ್ರೆ, ಇಲ್ಲಿರೋದು ಇದೊಂದೇ ಚಿತ್ರಮಂದಿರ ಈಗಾ ಕೋವಿಡ್ ನಿಂದಾಗಿ ಹಲವಾರು ಸಂಕಷ್ಟಕ್ಕೆ ಸಿಲುಕಿಕೊಂಡ ಮಾಲೀಕರು ಚಿತ್ರಮಂದಿರವನ್ನು ತೆರೆಯುತ್ತಿಲ್ಲಾ, ಹೀಗಾಗಿ ತೆರೆದ ಬೆರಳೆಣಿಕೆಯ ಥಿಯೇಟರ್ ಗಳಿಗೆ ನವಲಗುಂದ ಜನರು ಹುಬ್ಬಳ್ಳಿ ಅಥವಾ ಧಾರವಾಡಕ್ಕೆ ಹೊರಟಿದ್ದಾರೆ. ಇದರಿಂದ ಸಿನಿ ಪ್ರಿಯರಿಗೂ ಚಿತ್ರಮಂದಿರದ ಮಾಲೀಕರಿಗೂ ಪೆಟ್ಟು ಬೀಳುತ್ತಿದೆ. ಮಾಲೀಕರ ಸಮಸ್ಯೆಗೆ ಸರ್ಕಾರ ಆಷ್ಟು ಬೇಗ ಸ್ಪಂದಿಸಬೇಕಿದೆ.

Edited By :
Kshetra Samachara

Kshetra Samachara

06/12/2020 10:07 am

Cinque Terre

61.67 K

Cinque Terre

4

ಸಂಬಂಧಿತ ಸುದ್ದಿ