ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷ್ಮೇಶ್ವರ: ಅಮ್ಮಾ ಬೇಗ ಬಾ...:ಕಣ್ಣೀರು ಹಾಕುತ್ತಿರುವ ಕರುಳಿನ ಕುಡಿಗಳು...!

ಲಕ್ಷ್ಮೇಶ್ವರ: ಅದೊಂದು ಸುಂದರ ಕುಟುಂಬ. ಆದರೆ, ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಗೋತ್ತಿಲ್ಲ. ಶಾಲೆಗೆ ಹೋದ ತಾಯಿ ಮನೆಗೆ ಬರಲೇ ಇಲ್ಲ. ತಾಯಿಗಾಗಿ ಮಕ್ಕಳು ಹುಡುಕಾಡದ ಜಾಗವಿಲ್ಲ. ಬೇಡಿಕೊಳ್ಳದ ದೇವರುಗಳಿಲ್ಲ. ಆದರೆ,ಆ ತಾಯಿ ಹೋಗಿದ್ದಾದ್ರೂ ಎಲ್ಲಿ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಾಯಿದೆ. ಸದಾ ತಾಯಿ ಪ್ರೀತಿಯ ಆರೈಕೆಯಲ್ಲಿ ಬೆಳೆದ ಮಕ್ಕಳು ಈಗ ತಾಯಿ ಇಲ್ಲದೇ ರೋಧಿಸುತ್ತಿದ್ದಾರೆ. ಅಮ್ಮಾ ಎಲ್ಲಿದ್ದಿಯಾ ಬಾ. ನಿನ್ನ ಬಿಟ್ಟು ಬದುಕೋಕೇ ಆಗಲ್ಲ ಅಂತ‌ ಕರುಳಿನ ಕುಡಿಗಳು ಕಣ್ಣೀರು ಹಾಕ್ತಾಯಿವೆ..

ಅಮ್ಮಾ ಬೇಗ ಭಾ ಅಂತಾ ಕಣ್ಣೀರು ಹಾಕುತ್ತಿರುವ ಕರುಳಿನ ಕುಡಿಗಳು..!

ಶಾಲೆಗೆ ಹೋದ ಶಿಕ್ಷಕಿ ಇದುವರಿಗೆ ಪತ್ತೆಯಾಗಿಲ್ಲಾ, ಕಣ್ಣೀರು ಹಾಕುತ್ತಿರುವ ಮಕ್ಕಳು...

ಕಣ್ಣೀರು ಬರೀ ಕಣ್ಣೀರು. ಸದಾ ತಾಯಿ ಆರೈಕೆಯಲ್ಲಿ ಬೆಳೆದ ‌ಮಕ್ಕಳ‌‌ ಕಣ್ಣೀರಿನ ಕಥೆಯಿದು. ಮಗಳೇ ಊಟ‌ ಮಾಡಿದಿಯಾ ಅಂತ ಕೇಳೋರಿಲ್ಲ.‌ ಮಗನೇ ತಿಂಡಿ ತಿಂದಿಯಾ ಅಂತ ವಿಚಾರಿಸುವ ತಾಯಿ ಇಲ್ಲ. ರೀ ಚಹಾ ಬೇಕಾ ಅಂತ ಕೇಳೋ ಪತ್ನಿ ಇಲ್ಲ. ತಾಯಿ‌ ಇಲ್ಲದ ಮನೆ. ಈಗ ದೇವರಿಲ್ಲದ ದೇವಸ್ಥಾನವಾಗಿದೆ. ಹೌದು ಇದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಸವರಾಜ್ ಬಾಳೇಶ್ವರಮಠ ಕುಟುಂಬದ ಕಣ್ಣೀರಿನ ಕಥೆ. ಬಸವರಾಜ್ ಪತ್ನಿ ಸರ್ಕಾರಿ ಶಾಲೆ ಶಿಕ್ಷಕಿ. ಹೆಸರು ರಮೀಟಾ. ಮದುವೆಯಾಗಿ ಬರೊಬ್ಬರಿ 24 ವರ್ಷಗಳಾಗಿವೆ. ಆದರೆ, ಸಂಸಾರದ ಬದುಕಲ್ಲಿ ಒಂದೇ ಒಂದು ದಿನ ಈ ದಂಪತಿ ನಡುವೆ ಸಣ್ಣ ಜಗಳ‌ಕೂಡ ಆಗಿಲ್ಲ. ಅದೊಂದು ಸುಂದರ ಸಂಸಾರ ಜೋಡಿ. ಮುದ್ದಾದ ಇಬ್ಬರು ಮಕ್ಕಳು ಕೂಡ ಇದ್ದಾರೆ. 23 ವರ್ಷದ ಪುತ್ರ ನೋವೆಲ್, 19 ವರ್ಷದ ಪುತ್ರಿ ರೇಚಲ್ ಇದ್ದಾರೆ. ಇವರಿಬ್ಬರೂ ಅಮ್ಮನ‌ ಮುದ್ದಿನ ಮಕ್ಕಳು. ಆದರೆ, ಈ ಚಂದದ ತುಂಬು ಕುಟುಂಬದ ಮೇಲೆ ಅದ್ಯಾರ್ ವಕ್ರದೃಷ್ಠಿ ಬಿತ್ತೋ ಗೋತ್ತಿಲ್ಲ. ಶಾಲೆಗೆ ಹೋದ ತಾಯಿ ರಮೀಟಾ ವಾಪಸ ಮನೆಗೆ ಬಂದಿಲ್ಲ. ಪಕ್ಕದ ಹುಬ್ಬಳ್ಳಿ, ಧಾರವಾಡ, ಹಾವೇರಿ, ಶಿರಸಿ, ಕುಮಟಾ, ದಾವಣಗೆರೆ ಸೇರಿದಂತೆ ಎಲ್ಲ ಕಡೆಯೂ ಹುಡುಕಿದ್ದಾರೆ. ಸಂಬಂಧಿಕರಿಗೂ ವಿಷಯ ತಿಳಿಸಿದ್ದು ಅವ್ರೂ‌ ಎಲ್ಲ ಕಡೆ ಹುಡುಕಾಡಿದ್ದಾರೆ.

ಎಂದಿನಂತೆ ನವೆಂಬರ್ 11 ರಂದು ರಮೀಟಾ ಬೆಳಗ್ಗೆ ರೆಡಿಯಾಗಿ ಲಕ್ಷ್ಮೇಶ್ವರ ತಾಲೂಕಿನ ಯಲ್ಲಾಪುರ ಗ್ರಾಮಕ್ಕೆ ಶಾಲೆಗೆ ಹೋಗಿದ್ದಾರೆ. ಶಾಲೆ ‌ಮುಗಿದ ಬಳಿಕ ‌ಮರಳಿ ಸರ್ಕಾರಿ ಬಸ್ ಏರಿ‌ ಲಕ್ಷ್ಮೇಶ್ವರ ಪಟ್ಟಣಕ್ಕೆ ಆಗಮಿಸಿದ್ದಾರೆ. ಆದರೆ ಬಸ್ ನಿಲ್ದಾಣದಲ್ಲಿ ಇಳಿದ ಆ ಶಿಕ್ಷಕಿ ಏಕಾಏಕಿ ಮಾಯವಾಗಿದ್ದಾರೆ. ಮನೆಗೆ ಅಮ್ಮ ಬಂದಿಲ್ಲ. ಅಂದು ಸಮಯ ಸಂಜೆ 5 ಗಂಟೆ ಆಗಿದೆ. ಆಗ ಪತಿ ಬಸವರಾಜ್ ಶಾಲೆಯ ಇತರ ಶಿಕ್ಷಕರಿಗೆ ಫೋನ್ ಮಾಡಿ‌ ವಿಚಾರಿಸಿದ್ದಾರೆ. ಮಧ್ಯಾಹ್ನವೇ ಹೋಗಿದ್ದಾರೆ ಅಂತ ಹೇಳಿದ್ದಾರೆ. ತಕ್ಷಣ ಬಸ್ ನಿಲ್ದಾಣಕ್ಕೆ ಆಗಮಿಸಿ ಹುಡುಕಾಡಿದ್ದಾರೆ. ಆದ್ರೂ ಸಿಕ್ಕಿಲ್ಲ. ಕಂಡಕ್ಟರ್ ನ‌ನ್ನು ವಿಚಾರಣೆ ಮಾಡಿದ್ದಾರೆ. ಮೇಡಂ ಬಸ್ ನಲ್ಲಿ ಬಂದಿದ್ದಾರೆ ಅಂತ ಹೇಳಿದ್ದಾರೆ. ಆದ್ರೆ ಇಲ್ಲಿಗೆ ಹೋಗಿದ್ದಾರೆ ಅಂತಾ ಮಾತ್ರ ಗೋತ್ತಾಗುತ್ತಿಲ್ಲಾ..

ತಾಯಿ ಇಲ್ಲದೇ ದಿನ ದುಡುವುದು ಕಷ್ಟವಾಗಿದೆ. ಕಣ್ಣಿಗೆ ನಿದ್ದೆ ಇಲ್ಲ. ಹೊಟ್ಟೆಗೆ ಸರಿಯಾದ ಊಟವಿಲ್ಲ. ಮನೆಯಲ್ಲಿ ಮನೆ ಯಜಮಾನಿ ಇಲ್ಲದೇ ಅಡುಗೆ ಮನೆ ಭಣಗುಡುತ್ತಿದೆ.‌ ತಾಯಿ ಇಲ್ಲದ ಬದುಕು ಕಣ್ಣೀರು ಕಥಯಾಗಿದೆ. ಅಮ್ಮಾ ಎಲ್ಲಿದ್ರೂ ಮನೆಗೆ ಬಾ ಅಂತ‌ ಮಕ್ಕಳು ಅವಲತ್ತುಕೊಳ್ಳುತ್ತಿದ್ದಾರೆ. ಈ‌ ಮಹಾ ತಾಯಿ ಎಲ್ಲಿಯಾದರೂ ಕಂಡ್ರೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅಂತ ಇಡೀ ಕುಟುಂಬ ಮನವಿ ಮಾಡಿದೆ.

Edited By : Nagesh Gaonkar
Kshetra Samachara

Kshetra Samachara

05/12/2020 04:09 pm

Cinque Terre

62.5 K

Cinque Terre

9

ಸಂಬಂಧಿತ ಸುದ್ದಿ