ಹುಬ್ಬಳ್ಳಿ- ಯುವತಿಯರು ತಮ್ಮ ಸ್ವಂತ ಉದ್ಯೋಗದಿಂದ ಜೀವನ ಸಾಗಿಸಬೇಕು ಎಂಬ ಉದ್ದೇಶದಿಂದ, ಇಲ್ಲೊಬ್ಬ ಮಹಿಳೆ, ಸಾವಿರಾರು ಮಹಿಳೆಯರಿಗೆ ಸ್ವಂತ ಉದ್ಯೋಗಕ್ಕೆ ಉಚಿತವಾಗಿ ತರಬೇತಿ ನೀಡುತ್ತಿದ್ದಾಳೆ. ಅಷ್ಟಕ್ಕೂ ಆ ಮಹಿಳೆ ಯಾರು ಅಂತಿರಾ ಹಾಗಿದ್ದರೆ ಈ ಸ್ಟೋರಿ ನೋಡಿ....
ಹೀಗೆ ಯುವತಿಯರಿಗೆ ಹಾಗೂ ಮಹಿಳೆಯರಿಗೆ ಮತ್ತು ಅನಾಥ ಮಕ್ಕಳಿಗೆ, ಕ್ಲಾಸ್ ನ್ನು ಹೇಳುತ್ತಿರುವ ಈಕೆಯ ಹೆಸರು ಪದ್ಮಪ್ರೀಯಾ ಸಂಗೊಳ್ಳಿ. ಹುಬ್ಬಳ್ಳಿಯ ಸಾಯಿನಗರದ ನಿವಾಸಿ. ಇವರು, ಮಹಿಳಾ ಸಬಲೀಕರಣ ಹಾಗೂ ಸ್ವಂತ ಉದ್ಯೋಗದಲ್ಲಿ ಮಹಿಳೆಯರು ನಿರತರಾಗಲು ಎಂಬ ಉದ್ದೇಶದಿಂದ. ನಮ್ಮ ಕುಟುಂಬ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಉಚಿತವಾಗಿ ಮಹಿಳೆಯರಿಗೆ ವಿವಿಧ ಬಗ್ಗೆಯ ತರಬೇತಿಯನ್ನು ನೀಡುತ್ತಿದ್ದಾರೆ.
ಇಲ್ಲಿಯ ವರೆಗೆ ಸುಮಾರು 2000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯೂಟಿಷಿಯನ್, ಹೊಲಗಿ ತರಬೇತಿ, ಸಾರಿಗೆ ಗುಚ್ಚು ಕಟ್ಟುವುದು, ಫ್ಯಾಷನ್ ಡಿಸೈನಿಂಗ ಕಲಿಸಿ ಕೊಡುತ್ತಿದ್ದಾರೆ. ಅಷ್ಟೇ ಅಲ್ಲದೆ ಪದ್ಮಪ್ರೀಯಾ ಅವರು, ಹಳ್ಳಿಗಳಿಗೆ ಹೋಗಿ ಅಲ್ಲಿನ ಮಹಿಳೆಯರಿಗೂ ಸಹ ಹಲವಾರು ತರಬೇತಿ ನೀಡಿ, ಉದ್ಯೋಗ ಕಲ್ಪಸಿಕೊಳ್ಳುವುದಕ್ಕೆ ದಾರಿಯಾಗಿದ್ದಾರೆ.....
ಒಟ್ಟಿನಲ್ಲಿ ಪದ್ಮಪ್ರೀಯಾ ಅವರ ಸಂಸ್ಥೆಯಲ್ಲಿ ಎಷ್ಟೋ ಮಹಿಳೆಯರು ಇಲ್ಲಿ ತರಬೇತಿ ಪಡೆದುಕೊಂಡು, ತಮ್ಮ ಸುಂದರವಾದ ಜೀವನ ನಡೆಸುತ್ತಿರುವುದು ಎಲ್ಲರಲ್ಲಿ ಸಂತಸ ಮೂಡಿಸಿದ್ದಾರೆ. ಆಸಕ್ತಿ ಉಳ್ಳುವರು ಸಾಯಿನಗರದ ಸಿದ್ದಪ್ಪಜ್ಜ ದೇವಸ್ಥಾನದ ಪಕ್ಕದಲ್ಲಿರುವ ಇವರ ಮನೆಗೆ ಬಂದು ಉಚಿತವಾಗಿ ತರಬೇತಿ ಪಡೆಯಬಹುದು ಎಂದು ತಿಳಿಸಿದ್ದಾರೆ......!
Kshetra Samachara
04/12/2020 09:42 pm