ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಉಚಿತ ಸೇನಾ ತರಬೇತಿ ನೀಡಿ ಮನೆಗೊಬ್ಬ ಯೋಧನನ್ನು ನಿರ್ಮಿಸಲು ಸೈ ಎಂದ ಸೈನಿಕ

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

ಕುಂದಗೋಳ : ದೇಶ ದೇಶ ಸೇವೆ ಎಂದರೇ ನಮ್ಮಲ್ಲಿರುವ ಉತ್ಸಾಹವನ್ನು ನೂರ್ಮಡಿ ಮಾಡುವ ಯೋಧರ ಹೋರಾಟವನ್ನು ನಾವು ನೀವು ಕೇಳಿದ್ದೇವೆ ನೋಡಿದ್ದೇವೆ.

ಅದರಂತೆ ಇಲ್ಲೋಬ್ಬ 71 ಆರ್ಮಡ್ ರೆಜಿಮೆಂಟ್ ಯೋಧ ಸತತ 16 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಜೂನಿಯರ್ ಲೀಡರ್ ಆಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಪ್ರತಿ ಮನೆಗೊಬ್ಬ ಯೋಧನನ್ನು ನಿರ್ಮಿಸುವ ಜವಾಬ್ದಾರಿಗೆ ಸದ್ದಿಲ್ಲದೆ ಸೈ ಎಂದಿದ್ದಾರೆ.

ಇಂದಿಗೆ 2 ಸಾವಿರಕ್ಕೂ ಹೆಚ್ಚು ಮಕ್ಕಳನ್ನ ಸೇನೆಗೆ ಸೇರುವ ನಿಟ್ಟಿನಲ್ಲಿ ಅವರು ಇರುವಲ್ಲಿಯೇ ತೆರಳಿ ಉಚಿತ ಸೇನಾ ತರಬೇತಿ ನೀಡಿ ಅವರನ್ನು ಸೇನೆಗೆ ಭರ್ತಿ ಮಾಡಲು ಪಣ ತೊಟ್ಟಿದ್ದಾರೆ.

ಹೌದು ! ಇದು ಆಶ್ಚರ್ಯವಾದರೂ ಸತ್ಯವಾದ ವಿಚಾರ. ಇವರ ಹೆಸರು ನಾಗಾರಾಜ ಗವಳಿ ಕುಂದಗೋಳದ ನಿವಾಸಿಗಳು. ತಮ್ಮ ಕಡು ಬಡತನದಲ್ಲಿ ಸೇನೆ ಸೇರುವ ಕನಸು ಕಂಡು ಸತತ ಪರಿಶ್ರಮದ ಹಾದಿಯಲ್ಲಿ ಅದನ್ನು ಸಾಕಾರಗೊಳಿಸಿ ಭಾರತಾಂಬೆ ಮಡಿಲಲ್ಲಿ ಬರೋಬ್ಬರಿ 16 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಮರಳಿ ಸಿಇಟಿ ಪರೀಕ್ಷೆ ಎದುರಿಸಿ ಕುಂದಗೋಳದ ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ನೀಡುತ್ತಾ ಸೇನೆ ಸೇರ ಬಯಸುವ ಮಕ್ಕಳಿಗೆ ಉಚಿತ ತರಬೇತಿ ನೀಡುತ್ತಲಿದ್ದಾರೆ.

ಕೇಳಿದ್ರಲ್ಲಾ ಕೇವಲ ಸೇನಾ ತರಬೇತಿ ಅಷ್ಟೇ ಅಲ್ಲಾ, ಸ್ವಾಮಿ ಮಕ್ಕಳಿಗೆ ಅಕಸ್ಮಿಕ ಅವಘಡ ಅಪಘಾತ ಹಾಗೂ ವಿಷ ಜಂತುಗಳ ಕೈಗೆ ಸಿಕ್ಕಾಗ ಪಾರಾಗುವ ಹೊಸ ಹೊಸ ಉಪಾಯ ನೀಡುತ್ತಲಿರುವ ಇವ್ರೂ. ಯಾಕ್ರೀ ? ದೈಹಿಕ ಶಿಕ್ಷಕ ಉದ್ಯೋಗ ಆಯ್ದು ಕೊಡ್ರೀ ಎಂದ್ರೇ ಎನು‌‌ ಹೇಳಿದ್ರೂ ಗೊತ್ತಾ ?

ರಾಜಸ್ಥಾನ, ಪಂಜಾಬ್, ಹರಿಯಾಣ, ಜಮ್ಮು-ಕಾಶ್ಮೀರ, ಹಿಮಾಲಯ ಪ್ರದೇಶ ಸೇರಿದಂತೆ ಭಾರತದ ವಿವಿಧೆಡೆ ಸೇವೆ ಸಲ್ಲಿಸಿದ ಇವರು. ಸರ್ ನನಗೆ ಸೇನೆ ಸೇರೊ ಇಚ್ಚೆ ಇದೆ ತರಬೇತಿಗೆ ಪಡೆಯೋಕೆ ಆಗ್ತಾ ಇಲ್ಲಾ ಎಂದ್ರೇ ನಿಮ್ಮೂರಿಗೆ ಬಂದು ಉಚಿತ ಸೇವೆ ಸಲ್ಲಿಸಲು ನಾಗಾರಾಜ ಗವಳಿ ಎಸ್ ಎಂತಾರೇ.

ಇವರ ಈ ಕಾಯಕವನ್ನು ಗುರುತಿಸಿ ಸರ್ಕಾರ, ಸೇನೆ, ಧಾರ್ಮಿಕ ಕಾರ್ಯಕ್ರಮಗಳು, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ನೀಡಿದ ಪ್ರಶಸ್ತಿ ಪುರಸ್ಕಾರಗಳಿಗೆ ಲೆಕ್ಕವಿಲ್ಲಾ ಬಿಡಿ.

ನಾಗಾರಾಜ ಗವಳಿ ಗರಡಿಯಲ್ಲಿ ಪಳಗಿದ ಅದೆಷ್ಟೋ ಮಕ್ಕಳು ಇಂದು ಸೇನಾ ಭರ್ತಿಗೆ ತಯಾರಾಗಿದ್ದು, ಪುರುಷರಂತೆ ಮಹಿಳೆಯರು ಸೇನೆಗೆ ಸೇರಲು ತಮ್ಮ ಮಕ್ಕಳಂತೆ ತರಬೇತಿ ನೀಡಿ ಇಡೀ ರಾಜ್ಯವ್ಯಾಪಿ ಸಂಚರಿಸಿ ಉಚಿತ ತರಬೇತಿ ನೀಡುವ ಇವರಗೊಂದು ಸಲಾಂ ಹೇಳಬೆಕಲ್ವೇ.

Edited By :
Kshetra Samachara

Kshetra Samachara

04/12/2020 05:23 pm

Cinque Terre

52.92 K

Cinque Terre

14

ಸಂಬಂಧಿತ ಸುದ್ದಿ