ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಕುಂದಗೋಳ : ಸಾಧಿಸುವವರಿಗೆ ವಯಸ್ಸು ಕೇವಲ ಸಂಖ್ಯೆ ಎನ್ನುವುದಕ್ಕೆ ಇವರೇ ಹಸಿ ಉದಾಹರಣೆ ಎಪ್ಪತ್ತರ ಇಳಿ ವಯಸ್ಸಿನಲ್ಲೂ ಇಪ್ಪತ್ತರ ಯುವಕನಂತೆ ಕಾರ್ಯ ನಿರ್ವಹಿಸುತ್ತಿರುವ ಇವರು ನಿಜ್ಕಕೂ ಯುವ ಜನತೆಗೆ ಮಾದರಿ. ಕಾಯಕದಲ್ಲೇ ದೇವರನ್ನು ಕಾಣುವ ಈ ಹಿರಿಯ ಜೀವ ಇಂದಿಗೂ ಸ್ವಂತ ದುಡಿಮೆಯಲ್ಲಿಯೇ ಕುಟುಂಬ ನಿರ್ವಹಣೆ ಮಾಡುತ್ತಿದೆ.
ಹೌದು ! ಕುಂದಗೋಳ ಪಟ್ಟಣದ ನಿವಾಸಿಯಾದ ರಾಜೇಸಾಬ ಗೂಡವಾಲ ಸತತ 50 ವರ್ಷಗಳಿಂದ ಐಸ್ ಕ್ರೀಂ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದು, ಕುಂದಗೋಳ ಪಟ್ಟಣ ಸೇರಿದಂತೆ ಸುತ್ತ ಎಲ್ಲ ಹಳ್ಳಿಗಳನ್ನೂ ಕಾಲ್ನಡಿಗೆಯಲ್ಲಿ ಸುತ್ತಿ ಬದುಕಿಗೆ ಅನ್ನ ಕಂಡುಕೊಂಡಿದ್ದಾರೆ.
ಅವರ ಆ ಬದುಕಿನ ಮಾತೇನು ನೀವೆ ಕೇಳ್ಬಿಡಿ.
ತಮ್ಮ ನಾಲ್ಕು ಜನ ಹೆಣ್ಣು ಮಕ್ಕಳನ್ನು ಮದ್ವೆ ಮಾಡಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದಿ ಇವರು ಸದ್ಯ ತಮ್ಮ ಹೆಂಡತಿಯೊಂದಿಗೆ ಬದುಕು ನಡೆಸುತ್ತಿದ್ದಾರೆ.
ಹೆಂಡತಿಗೆ ವಯೋಸಹಜ ಕಾಯಿಲೆ ಆದರೂ ಎದೆಗುಂದದ ರಾಜೇಸಾಬ ತಮ್ಮ ಕುಟುಂಬದ ನಿರ್ವಹಣೆಗಾಗಿ ಯಾರ ಬಳಿಯೂ ಅಂಗಲಾಚದೆ ಎಪ್ಪತ್ತರಲ್ಲೂ ಇಪ್ಪತ್ತರ ಯುವಕರಂತೆ ನಿತ್ಯ ಕಾಲ್ನಡಿಗೆ ಮೂಲಕ ಐಸ್ ಕ್ರೀಂ ಮಾರಾಟ ಮಾಡ್ತಾರೆ.
ಆಧುನಿಕ ಕಾಲದಲ್ಲಿ ಯುವಕರು ನನಗೆ ಕೆಲಸವಿಲ್ಲಾ... ಮಾಡುವ ಕೆಲ್ಸಾ ಸರಿಯಿಲ್ಲಾ ಎಂದು ಕೈ ಕಟ್ಟಿ ಕೂತು ದುಶ್ಚಟಕ್ಕೆ ಬಲಿಯಾಗುವ ಈ ದಿನಗಳಲ್ಲಿ ರಾಜೇಸಾಬರ ಬದುಕು ನಿಜಕ್ಕೂ ಮಾದರಿ.
Kshetra Samachara
02/12/2020 04:13 pm