ಕುಂದಗೋಳ : ಸಾಮಾಜಿಕ ಅಸಮತೋಲನ ಹೋಗಲಾಡಿಸಲು ಶೈಕ್ಷಣಿಕ, ಸಾಮಾಜಿಕ ಆರ್ಥಿಕ ಅಭಿವೃದ್ಧಿ ಯೋಜನೆಗಳ ಕಾರ್ಯಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಾ ಬರುತ್ತಿದೆ. ಎಂದು ತಹಶೀಲ್ದಾರ ಬಸವರಾಜ ಮೆಳವಂಕಿ ಹೇಳಿದರು.
ಪಟ್ಟಣದಲ್ಲಿ ದುರ್ಬಲ ವರ್ಗಗಳ ಐಕ್ಯತಾ ದಿನಾಚರಣೆಯ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಸಮಾಜಕಲ್ಯಾಣ ಇಲಾಖೆಯಿಂದ ವಸತಿ ಸಹಿತ ಶಿಕ್ಷಣ, ಮೆಟ್ರಿಕ್ ಪೂರ್ವ ಹಾಗೂ ನಂತರ ನೀಡುವ ವಿದ್ಯಾರ್ಥಿ ವೇತನ, ಪ್ರತಿಷ್ಠಿತ ಶಾಲೆಗಳಿಗೆ ಪ್ರವೇಶ, ಎಂಫಿಲ್, ಪಿ.ಎಚ್.ಡಿಯವರಿಗೆ ಫೆಲೋಶಿಪ್ ಪುಸ್ತಕ ಭಂಡಾರದ ವ್ಯವಸ್ಥೆ, ಅನೇಕ ತರಬೇತಿಗಳ ವ್ಯವಸ್ಥೆ, ಸಮುದಾಯ ಭವನಗಳ ನಿರ್ಮಾಣ ಹಾಗೂ ಅಂತರ್ಜಾತಿ ವಿವಾಹ ಆದವರಿಗೆ ಪ್ರೋತ್ಸಾಹಧನ ಸೇರಿದಂತೆ ಅನೇಕ ಯೋಜನೆಗಳ ರೂಪಿಸಿ ದುರ್ಬಲ ವರ್ಗದವರಿಗೆ ಸಹಕಾರ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣಾಧಿಕಾರಿ ನಂದಾ ಹುರುಳಿ, ವಿ.ಎ.ಗುಂಜಳ, ಕಮಲಾಕ್ಷಿ ಕಾಲವಾಡ, ಬಸುರಾಜ ರೆವಡೇನನರ, ಗುರುನಾಥ್ ಕುಟುಂಬದ, ಇತರರು ಉಪಸ್ಥಿತರಿದ್ದರು.
Kshetra Samachara
28/11/2020 03:06 pm