ಪಬ್ಲಿಕ್ ನೆಕ್ಸ್ಟ್ ವರದಿ : ಮಲ್ಲಿಕಾರ್ಜುನ ಪುರದನಗೌಡರ
ಕಲಘಟಗಿ : ಪಟ್ಟಣದ ಯುವಕ ತಮ್ಮ ಕಾಯಕದ ನಡುವೆಯೂ ದೇಶ,ವಿದೇಶ ಹಾಗೂ ಬ್ರಿಟಿಷ್ ಕಾಲದ ಅಪರೂಪದ ನಾಣ್ಯಗಳನ್ನು ಹಾಗೂ ನೋಟಗಳನ್ನು ಸಂಗ್ರಹಿಸಿದ್ದಾರೆ.ಪಟ್ಟಣದ ನಿವಾಸಿ ಸಣ್ಣ ಪಂಕ್ಚರ್ ರಿಪೇರಿ ಅಂಗಡಿ ಇಟ್ಟುಕೊಂಡಿರುವ ಸುನೀಲ ಕಮ್ಮಾರ ಅಪರೂಪದ ನಾಣ್ಯ ಸಂಗ್ರಾಹಕರಾಗಿದ್ದಾರೆ.
ಇವರ ಬಳಿ ಹಳೆಯ ಕಾಲದ,ವಿಜಯ ನಗರ ಸಾಮ್ರಾಜ್ಯ,ಚೋಳರ ಕಾಲ ,ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ,ಒಂದು ಪೈಸೆ,ಹತ್ತು ಪೈಸೆ,ಒಂದು ಆಣೆ,ಎರಡು ಆಣೆ ಹಾಗೂ ಚಾಲ್ತಿಯಲ್ಲಿರುವ ಅಪರೂಪದ ನಾಣ್ಯಗಳು,ನೋಟಗಳು,ಅದೇ ರೀತಿ ಆರ್ ಬಿ ಐ ವಿವಿಧ ಗವರ್ನರ್ ಗಳಕಾಲಾವಧಿಯ ನೋಟುಗಳು ಇವರ ಬಳಿ ಇವೆ.
ಬಾಲ್ಯದಿಂದಲೇ ನಾಣ್ಯ ಸಂಗ್ರಹ ಹವ್ಯಾಸ ಬೆಳೆಸಿಕೊಂಡಿದ್ದರಿಂದ ಇಷ್ಟೆಲ್ಲಾ ನಾಣ್ಯ ಹಾಗೂ ನೋಟ ಸಂಗ್ರಹಿಸಲು ಸಾಧ್ಯವಾಯಿತು ಎನ್ನುತ್ತಾರೆ ನಾಣ್ಯ ಸಂಗ್ರಾಹಕ ಸುನೀಲ ಕಮ್ಮಾರ.ಶಾಲೆ,ಕಾಲೇಜು ಹಾಗೂ ಸಭೆ ಸಮಾರಂಭಗಳಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ನಾಣ್ಯ ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಂದ ಮೆಚ್ಚುಗೆ ಪಾತ್ರರಾಗಿದ್ದಾರೆ.
Kshetra Samachara
25/11/2020 08:03 am