ಧಾರವಾಡ : ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಾನುವಾರುಗಳಿಗೆ ರೋಗ ಬಾಧೆ ಕಾಣಿಸಿಕೊಂಡು ಮೃತಪಡುತ್ತಿದ್ದು,ತಾಲೂಕಿನ ಮನಸೂರ ಗ್ರಾಮದಲ್ಲಿ ಚರ್ಮಗಂಟು ರೋಗದಿಂದ ರಿಯಾಕ್ಷನ್ ಆಗಿ ಜಾನುವಾರುಗಳು ಮೃತಪಡುತ್ತಿವೆ ಎಂದು ಹೈನುಗಾರಿಕೆ ಮಾಡುವರು ತಮ್ಮ ಗೋಳು ತೋಡಿಕೊಂಡಿದ್ದಾರೆ.
ಬಸವರಾಜ ಅಮರಗೋಳ ಎಂಬುವವರು ತಮ್ಮ ಅಳಲನ್ನು ತೊಂಡಿಕೊಂಡಿದ್ದು, ಜಾನುವಾರುಗಳಿಗೆ ಕಳೆದ ಕೆಲ ದಿನಗಳ ಹಿಂದೆ ಕಾಣಿಸಿಕೊಂಡ ಚರ್ಮಗಂಟು ರೋಗ ತಲೆ ನೋವಾಗಿತ್ತು.ಕಳೆದ ದಿನ ಹಿಂದೆ ಚುಚ್ಚುಮದ್ದು ಮಾಡಿಸಲಾಗಿತ್ತು,ಆದ್ರೆ ಅದರಿಂದ ರಿಯಾಕ್ಷನ್ ಆಗಿ ಸಣ್ಣ ಹೋರಿ ಮೃತಪಟ್ಟಿದೆ ಎಂದು ವಿಡಿಯೋ ಮೂಲಕ ತಮ್ಮ ನೋವು ತೋಡಿಕೊಂಡಿದ್ದಾರೆ.
ಚರ್ಮಗಂಟು ರೋಗದಿಂದ ಚೇತರಿಸಿಕೊಂಡು ಆರಾಮಾಗಿದ್ದ ಹೋರಿಗೆ ಎರಡು ಚುಚ್ಚುಮದ್ದು ಮಾಡಿಸಲಾಗಿತ್ತು. ಆದರೆ ರಿಯಾಕ್ಷನ್ ಆಗಿ ಮೃತಪಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.
ಸರಿಯಾದ ರೀತಿಯಲ್ಲಿ ಚಿಕಿತ್ಸೆ ಸಿಗದೇ ಜಾನುವಾರುಗಳು ಈ ರೀತಿ ಮೃತಪಡುತ್ತಿವೆ. ಗ್ರಾಮಕ್ಕೆ ಒಂದು ಪಶು ಆಸ್ಪತ್ರೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
Kshetra Samachara
24/11/2020 07:51 pm