ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಉಚಿತವಾಗಿ ಆಕಾಶ ಬುಟ್ಟಿ ವಿತರಿಸಿ ವಿನೂತನವಾಗಿ ದೀಪಾವಳಿ ಹಬ್ಬ ಆಚರಣೆ

ಕಲಘಟಗಿ: ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಯುವಕರು ಗ್ರಾಮಸ್ಥರಿಗೆ ಎರಡು ನೂರಕ್ಕೂ‌ ಹೆಚ್ಚು ಆಕಾಶ ಬುಟ್ಟಿಗಳನ್ನು ಉಚಿತವಾಗಿ ‌ನೀಡಿ ದೀಪಾವಳಿ ಹಬ್ಬವನ್ನು ವಿನೂತನವಾಗಿ ಆಚರಿಸಲಾಯಿತು.

ಗ್ರಾಮದ ಶ್ರೀ ಗಜಾನನ ಭಜನಾ ಸಂಘದ ಸಹಯೋಗದೊಂದಿಗೆ ಗ್ರಾಮದ ಯುವಕರಾದ ಎನ್. ಬಿ. ಮುತ್ತಣ್ಣವರ ಗೆಳೆಯರ ಬಳಗದ ವತಿಯಿಂದ ಪ್ರತಿಯೊಬ್ಬರ ಬಾಳಿಗೆ ದೀಪಾವಳಿ ಹಬ್ಬ ಬೆಳಕನ್ನು ನೀಡಲಿ ಹಾಗೂ ಪ್ರೀತಿಯ ಬಂಧ ಮತ್ತಷ್ಟು ಬಲಗೊಳ್ಳಲಿ ಎಂಬ‌ ಆಶಾಯದೊಂದಿಗೆ ಆಕಾಶ ಬುಟ್ಟಿ ವಿತರಿಸಲಾಗಿದೆ.

ಹುಬ್ಬಳ್ಳಿಯಿಂದ ಕಚ್ಚಾ ಸಾಮಗ್ರಿ ತಂದು ಮರು ಬಳಕೆ ಮಾಡಬಹುದಾದ ಆಕಾಶ ಬುಟ್ಟಿಯನ್ನು ಗ್ರಾಮದಲ್ಲಿಯೇ ತಯಾರಿಸಿ,ಎರಡು ನೂರಕ್ಕೂ ಹೆಚ್ಚುಆಕಾಶ ಬುಟ್ಟಿ (ಶಿವನ ಬುಟ್ಟಿ) ಗಳನ್ನು ಉಚಿತವಾಗಿ ವಿತರಿಸುವುದರ ಮೂಲಕ ವಿನೂತನವಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.

Edited By : Manjunath H D
Kshetra Samachara

Kshetra Samachara

16/11/2020 07:47 pm

Cinque Terre

36.71 K

Cinque Terre

3

ಸಂಬಂಧಿತ ಸುದ್ದಿ