ನವಲಗುಂದ : ದೀಪಾವಳಿ ಅಂಗವಾಗಿ ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ನ ಚಾಲಕರಾದ ಮಲ್ಲಿಕಾರ್ಜುನ ಒಗೆನ್ನವರ ತಮ್ಮ ಸ್ವಂತ ಖರ್ಚಿನಲ್ಲಿ ಬಸ್ ಅನ್ನು ವಿಶೇಷವಾಗಿ ಅಲಂಕಾರ ಮಾಡಿದ್ದರು...
ದೀಪಾವಳಿ ಹಬ್ಬದ ಆಚರಣೆ ಗ್ರಾಮಗಳಲ್ಲಿನ ಜನರು ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ನ ಚಾಲಕರಾದ ಮಲ್ಲಿಕಾರ್ಜುನ ಒಗೆನ್ನವರ ಇಂದು ದೀಪಾವಳಿ ಹಬ್ಬದ ಅಂಗವಾಗಿ ಬಸ್ ಅನ್ನು ಶುಚಿಗೊಳಿಸಿ, ಹೂವು, ಕಬ್ಬು ಕಟ್ಟಿ ಅಲಂಕರಿಸಿ, ಪೂಜೆಯನ್ನು ನೆರವೇರಿಸಿದರು.
ಈ ವೇಳೆ ಗ್ರಾಮಸ್ಥರು ಕೂಡ ಪೂಜೆಯಲ್ಲಿ ಭಾಗಿಯಾಗಿದ್ದು, ಈ ಕೆಲಸಕ್ಕೆ ಚಂದ್ರೋದಯ ನಾಟ್ಯ ಸಂಘದ ಅಧ್ಯಕ್ಷರಾದ ಬಸವರಾಜ ಹಿತ್ತಲಮಣಿ ಅವರು ಅಭಿನಂದನೆಯನ್ನು ಸಹ ತಿಳಿಸಿದ್ದಾರೆ...
Kshetra Samachara
15/11/2020 08:19 pm