ಕಲಘಟಗಿ: ತಾಲೂಕಿನ ತಂಬೂರು ಗ್ರಾಮದ ಅರಣ್ಯ ಪ್ರದೇಶದ ಹತ್ತಿರ ಮೂರು ಆನೆಗಳು ಬೀಡು ಬಿಟ್ಟಿದ್ದು,ಆನೆಗಳನ್ನು ಅಟ್ಟಲು ಅರಣ್ಯ ಇಲಾಖೆಯ ಸಿಬ್ಬಂದಿ ಮಂಗಳವಾರ ರಾತ್ರಿ ಕಾರ್ಯಾಚರಣೆಯನ್ನು ಮಾಡಿದ್ದಾರೆ.
ಕಳೆದ ಕೆಲ ದಿನಗಳಿಂದ ಆನೆಗಳು ತಾಲೂಕನ್ನು ಪ್ರವೇಶ ಮಾಡಿದ್ದು, ಅರಣ್ಯದಂಚಿನ ಗ್ರಾಮಗಳ ರೈತರ ಹೊಲಗಳಿಗೆ ನೀರು ಅಹಾರ ಆರಸಿ ಲಗ್ಗೆ ಇಡುತ್ತಿವೆ.ಈಗಾಗಲೇ ಹದಿನಾಲ್ಕು ಆನೆಗಳ ಹಿಂಡನ್ನು ಕಿರವತ್ತಿ ಅರಣ್ಯ ಪ್ರದೇಶಕ್ಕೆ ಸಾಗಿಸಲಾಗಿದ್ದು,ಮೂರು ಆನೆಗಳು ತಂಬೂರ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿವೆ.
ಅರಣ್ಯ ಸಿಬ್ಬಂದಿ ತಂಬೂರು ಹತ್ತಿರ ಕಾಣಿಕೂಂಡ ಮೂರು ಆನೆಗಳನ್ನು ಓಡಿಸಲು ಕಾರ್ಯಚರಣೆಗೆ ಇಳಿದಿದ್ದಾರೆ.
Kshetra Samachara
11/11/2020 07:42 pm