ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : 'ಥರ್ಮಾಕೋಲ್’ ಬಳಸಿ ರೆಡಿ ಮಾಡಿ ವಿಭಿನ್ನ ವಿನೂತನ ವಸ್ತುಗಳು

ಪಬ್ಲಿಕ್ ನೆಕ್ಸ್ಟ್ ವಿಶೇಷ ಪ್ರಶಾಂತ ಲೋಕಾಪುರ

ಧಾರವಾಡ : ಕಸದಿಂದ ರಸ ಎನ್ನುವ ಮಾತು ನೂರಕ್ಕೆ ನೂರು ಸತ್ಯ. ನಾವು ಬೇಡವೆಂದು ಬಿಸಾಡುವ ವಸ್ತುಗಳನ್ನ ಮನೆಯ ಅಲಂಕಾರಕ್ಕಾಗಿ ಉಪಯೋಗಿಸಿ ಹೊಸ ರೂಪ ನೀಡಿ ಮನೆಯ ಅಂದ ಹೆಚ್ಚಿಸಲು ಸಾಧ್ಯವಿದೆ. ಆ ವಸ್ತು ಯಾವುದು ಆ ವಸ್ತುವನ್ನ ಬಿಸಾಡುವ ಮುನ್ನ ಅದನ್ನೇ ಗೃಹೋಪಯೋಗಿ ವಸ್ತುವನ್ನಾಗಿ ಉಪಯೋಗ ಮಾಡೋದು ಹೇಗೆ ಅನ್ನೋದಾದ್ರೆ ಈ ಸ್ಟೋರಿ ನೋಡಿ.‌

ಒಂದೆಡೆ ರಸ್ತೆಯಲ್ಲಿ ಬಿಸಾಡಿ ವಸ್ತುಗಳನ್ನ ಸಂಗ್ರಹಿಸಿದ ಥರ್ಮಾಕೋಲ್(ಬೆಂಡು)ಗಳು ಇನ್ನೊಂದಡೆ ಅದೇ ಥರ್ಮಾಕೋಲ್ ಗಳಿಂದ ನಿರ್ಮಾಣವಾದ ಮಂಟಪ, ಮಂಟಪದಲ್ಲಿ ಕುಳಿತಿರುವ ಗಣೇಶ. ಒಂದೆಡೆ ಬಾಹ್ಯಾಕಾಶ, ನೀರಿನ ಹೊಂಡ ಹೀಗೆ ವಿಭಿನ್ನವಾಗಿ ಥರ್ಮಾಕೋಲ್ ಉಪಯೋಗಿಸಿ ಹೊಸ್ ಟಚ್ ಕೊಟ್ಟ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ.

'ಹೈಡೆನ್ಸಿಟಿ ಥರ್ಮಾಕೋಲ್’ ಬಹುತೇಕ ತಿಪ್ಪೆಗಳಲ್ಲಿ ಎಸೆಯಲ್ಪಡುವ ಬಹುದೊಡ್ಡ ತ್ಯಾಜ್ಯ. ಥರ್ಮಾಕೋಲ್ ತ್ಯಾಜ್ಯಕ್ಕೆ ಯಾರಾದರೊಬ್ಬರು ಬೆಂಕಿಕಡ್ಡಿ ಗೀರಿದರೆ ಇಡೀ ದಿನ ಗರಿಷ್ಠ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೊರ ಸೂಸಿ, ವಿಷಾನಿಲ ವಾತಾವರಣಕ್ಕೆ ಸೇರ್ಪಡೆಗೊಳ್ಳುತ್ತದೆ. ಮನೆಗೆ ತಂದ ವಸ್ತುಗಳನ್ನೇ ಬಳಸಿ ಪುನರ್ಬಳಕೆ ಮಾಡಿಕೊಳ್ಳಬೇಕಾಗಿದೆ. ಥರ್ಮಾಕೋಲ್ ಬಳಸಿ ಲಕ್ಷ್ಮೀ ಪೂಜೆಗೆಂದು ಮಂಟಪವನ್ನು ಕೇವಲ ಫೆವಿಕಾಲ್ ಮಾತ್ರ ಬಳಸಿ, ಖರ್ಚು ಇಲ್ಲದೇ ಮಂಟಪ ರೂಪಿಸಿ ಗಮನ ಸೆಳೆದಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಕಲಾವಿದ ಮಂಜುನಾಥ ಹಿರೇಮಠ ಹೈಡೆನ್ಸಿಟಿ ಥರ್ಮಾಕೋಲ್‍ನಲ್ಲಿ ಕಳೆದ ವರ್ಷದ 12 ಹಿಂದೆ ಇಡಗುಂಜಿ ಗಣೇಶ ನಿರ್ಮಾಣ ಮಾಡಿದೆ. ಆಗಿನಿಂದ ಇಂದಿನವರೆಗೂ ಅದು ಹಾಗಿಯೇ ಇದೆ, ಅನೇಕ ಬೇಸಿಗೆ ಶಿಬಿರಗಳಲ್ಲಿ ಮಕ್ಕಳಿಗೆ ಪ್ರಾಣಿ, ಪಕ್ಷಿಗಳನ್ನು ತಯಾರಿಸಿದ್ದೇನೆ. ಶಾಲೆಗಳಲ್ಲಿ ಥರ್ಮಾಕೋಲ್‍ನಲ್ಲಿ ವಸ್ತುಗಳ ತಯಾರಿಕೆ ಬಗ್ಗೆ ಜಾಗೃತಿ ಮೂಡಿಸಿದ್ದು ಹೀಗೇ ಅನೇಕ ಮೂರ್ತಿಗಳನ್ನು ತಯಾರಿಸಬಹುದು ದೇವಿ ಮೂರ್ತಿಯನ್ನು ತಯಾರಿಸಬಹುದಾಗಿದೆ ಅದನ್ನು ಖಾಯಂ ಉಪಯೋಗ ಉಪಯೋಗಿಸುವುದರಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ.

ಇಲ್ಲಿಯ ವರೆಗೆ ಸುಮಾರು ಐನೂರಕ್ಕೂ ಹೆಚ್ಚು ಥರ್ಮಾಕೋಲ್ ಕಲಾಕೃತಿಗಳನ್ನು ರಚಿಸಿದ ಹಿರಿಮೆಯ ಜೊತೆಗೆ ಸಮಾಜಕ್ಕೊಂದು ಉತ್ತಮ ಸಂದೇಶ ನೀಡುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ.

Edited By : Manjunath H D
Kshetra Samachara

Kshetra Samachara

10/11/2020 10:45 am

Cinque Terre

34.04 K

Cinque Terre

1

ಸಂಬಂಧಿತ ಸುದ್ದಿ