ವರದಿ:ಮಲ್ಲಿಕಾರ್ಜುನ ಪುರದನಗೌಡರ
ಕಲಘಟಗಿ:ಚಿರು ಸರ್ಜಾ ಹಾಗೂ ಮೇಘನಾರಾಜ ಪುತ್ರನಿಗೆ ಕಲಘಟಗಿಯ ವಿಶ್ವ ಪ್ರಸಿದ್ಧ ಮನಮೋಹಕವಾದ ಬಣ್ಣದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಲು ಸಿದ್ದವಾಗಿದೆ.
ಹೌದು,ದಿವಂಗತ ಚಿರಂಜೀವಿ ಸರ್ಜಾ ಪತ್ನಿ ಮೇಘನಾರಾಜ ಅಕ್ಟೋಬರ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು,ಹಾವೇರಿಯ ಬಿಜೆಪಿ ಮುಖಂಡರಾದ ವನೀತಾ ಗುತ್ತಲ ಬಣ್ಣದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಲಿದ್ದಾರೆ.
ತೊಟ್ಟಿಲಿನ ಮೇಲೆ ಶ್ರೀಕೃಷ್ಣನ ಬಾಲ ಲೀಲಗಳ ಚಿತ್ರ ಬಿಡಿಸಲಾಗಿದೆ.ಕಲಾವಿದರಾದ ಮಾರುತಿ ಬಡಿಗೇರ,ತಿಪ್ಪಣ್ಣ ಬಡಿಗೇರ, ಹರೀಶ, ಶ್ರೀಶೈಲ್ ಬಡಿಗೇರ ಒಂದುವರೆ ತಿಂಗಳಲ್ಲಿ ತೊಟ್ಟಿಲನ್ನು ಚಿತ್ತಾಕರ್ಷಕವಾಗಿ ತಯಾರಿಸಿದ್ದಾರೆ.
ವನೀತಾ ಅವರು ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಿಣಿಯ ಮಗಳಿಗೆ ತೂಟ್ಟಿಲು ಉಡುಗೊರೆಯಾಗಿ ನೀಡಿದ್ದರು,ಈಗ ಮತ್ತೆ ಬಣ್ಣದ ತೂಟ್ಟಿಲನ್ನು ಮೇಘನಾರಾಜ ಅವರ ಪುತ್ರನಿಗೆ ಉಡುಗೊರೆ ನೀಡುತ್ತಿರುವುದು ವಿಶೇಷ.ತೊಟ್ಟಿಲಿನ ಅಂದಕ್ಕೆ ಡಾ.ರಾಜಕುಮಾರ, ಅಂಬರೀಶ್ ಸಹ ಮಾರು ಹೋಗಿದ್ದರು.ಯಶ್ ರಾಧಿಕಾ ಮನೆ ಸೇರಿರುವ ತೊಟ್ಟಿಲು ಈಗ ಮೇಘನಾರಾಜ ಪುತ್ರನಿಗೆ ಉಡುಗೊರೆಯಾಗಿ ನೀಡುತ್ತಿರುವುದು ಬಹು ವಿಶೇಷ.
Kshetra Samachara
09/11/2020 09:20 am