ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಮೊದಲ ಪ್ರಯತ್ನದಲ್ಲೇ ಯಶಸ್ಸು ತಂದ ಕೃಷಿಹೊಂಡ: 70ರ ವಯಸ್ಸಿನಲ್ಲೂ ಆನಂದ

ಕುಂದಗೋಳ: ಇಳಿವಯಸ್ಸಿನಲ್ಲೂ ಕೃಷಿ ಉತ್ಸಾಹಕ್ಕೆ ಸ್ಫೂರ್ತಿಯಾದ ಕೃಷಿಹೊಂಡ ಒಣಬೇಸಾಯದ ನಾಡು ಕುಂದಗೋಳದ ರೈತರಲ್ಲಿ ಹೊಸ ಸಂಚಲನ ಮೂಡಿಸಿ ಕೃಷಿ ಕ್ಷೇತ್ರಕ್ಕೆ ಜಲಧಾರೆಯನ್ನು ಹರಿಸಿದೆ.

ಈ ಮಾತಿಗೆ ಸಾಕ್ಷಿ ಎಂಬಂತೆ 70ರ ಇಳಿವಯಸ್ಸಿನಲ್ಲೂ ಇಲ್ಲೊಬ್ಬ ರೈತ ಕೃಷಿಯಲ್ಲಿ ಧೀರನಾಗಿ, ಉತ್ತಮ ಫಸಲನ್ನು ಬೆಳೆಯುವಲ್ಲಿ ಸಾಹುಕಾರನಾಗಿ ತನ್ನ ಏಳು ಎಕರೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ದ್ವಿಗುಣ ಆದಾಯದ ಗುಣಮಟ್ಟದ ಬೆಳೆ ಪಡೆದಿದ್ದಾರೆ.

ಕುಂದಗೋಳ ಪಟ್ಟಣದ ರೈತ ರುದ್ರಗೌಡ ಗೌಡಪ್ಪಗೌಡ ಪಾಟೀಲ ಎಂಬ ರೈತರು ಒಣಬೇಸಾಯದ ಭೂಮಿಯಲ್ಲಿ ಪರೀಕ್ಷೆ ಎಂಬಂತೆ ನಿರ್ಮಿಸಿಕೊಂಡ ಕೃಷಿಹೊಂಡ ಒಂದೇ ಪ್ರಯತ್ನಕ್ಕೆ ಅತ್ಯುತ್ತಮ ಫಲ ನೀಡಿದೆ.

ಈಗಾಗಲೇ ಮುಂಗಾರು ಹೆಸರು, ಸೋಯಾಬಿನ್, ಜೋಳ, ಶೇಂಗಾ, ಗುರೆಳ್ಳು ಬೆಳೆದು ಹಿಂಗಾರು ಸಹ ಉತ್ತಮ ಫಸಲಿನ ನಿರೀಕ್ಷೆ ಜೊತೆ ತರಕಾರಿ ತೋಟಗಾರಿಕೆ ಬೆಳೆಗೆ ಮನಸ್ಸು ಮಾಡಿದ್ದಾರೆ.

ತನ್ನ ಇಳಿವಯಸ್ಸಿನಲ್ಲೂ ಕೃಷಿಹೊಂಡದ ಸಿಹಿ ಕಂಡ ರೈತ ರುದ್ರಗೌಡ ಪಾಟೀಲ ಕೃಷಿಹೊಂಡ ಎಲ್ಲ ರೈತರಿಗೂ ವರದಾನ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಒಟ್ಟಾರೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಮಹತ್ವಾಕಾಂಕ್ಷಿ ಯೋಜನೆ ಜಲದ ಅಭಾವ ನೀಗಿ ಜಯದ ಬೇಸಾಯವನ್ನು ರೈತರಿಗೆ ವರವಾಗಿಸಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/09/2022 05:29 pm

Cinque Terre

227.79 K

Cinque Terre

0

ಸಂಬಂಧಿತ ಸುದ್ದಿ