ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಅನ್ನದಾತನ ಶ್ರಮಕ್ಕೆ ಒಲಿದ ಕೃಷಿಹೊಂಡ ವಾರ್ಷಿಕ 7 ಲಕ್ಷ ಆದಾಯ

ನವಲಗುಂದ: ಕೃಷಿಯಲ್ಲಿ ಖುಷಿ ಇದೆ. ನೆಮ್ಮದಿ ಇದೆ. ಎಲ್ಲದಕ್ಕಿಂತ ಮಿಗಿಲಾಗಿ ನಾನು ದೇಶದ ಬೆನ್ನೆಲುಬು ರೈತ ಎಂಬ ಹಿರಿಮೆ ಇದೆ. ಆ ಹಿರಿಮೆಗೆ ತಕ್ಕ ಬೆವರ ದುಡಿಮೆಯ ಲಕ್ಷ ಲಕ್ಷ ಆದಾಯದ ಮಾರ್ಗವಿದೆ.

ಹೌದು ! ರೈತಾಪಿ ಜಗತ್ತಿನ ಏಳ್ಗೆ ಅನ್ನದಾತನಲ್ಲಿ ಆತ್ಮಸ್ಥೈರ್ಯ ತುಂಬಲು ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ಕಾರಣವಾಗಿ ರೈತ ಸುಭಾಷ್ ಮಲ್ಲಪ್ಪ ಕುಲಕರ್ಣಿ ಅವರನ್ನು ಇಂದಿನ ದೇಶ್ ಕೃಷಿಯ ಸಾಧಕರನ್ನಾಗಿ ಅದೆಷ್ಟೋ ಉತ್ಸಾಹಿ ಅನ್ನದಾತರಿಗೆ ಪರಿಚಯಿಸಿದೆ.

ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ಸುಭಾಷ್ ಮಲ್ಲಪ್ಪ ಕುಲಕರ್ಣಿಯ 15 ಎಕರೆ ಜಮೀನಿಗೆ ನೆರವಾದ 100/100 ಸುತ್ತಳತೆಯ ಕೃಷಿಹೊಂಡ ತೋಟಗಾರಿಕೆ ಬೆಳೆ ಸೌತೆಕಾಯಿಯಲ್ಲೇ ಒಂದು ಲಕ್ಷ ರೂಪಾಯಿ ಆದಾಯದ ಜೊತೆ ವಾಣಿಜ್ಯ ಬೆಳೆಗೂ ಸಹಾಯವಾಗಿ ಅನ್ನದಾತನ ಬಾಳಲ್ಲಿ ಸಂತಸ ತಂದಿದೆ.

ಇದಲ್ಲದೆ ಮಳೆ ಅಭಾವದ ನಡುವೆ ಬೆಳೆಗಳ ಸಹಕಾರಿಯಾದ ಕೃಷಿಹೊಂಡ ಸಂಪೂರ್ಣ ಒಂದು ಬೆಳೆಯನ್ನು ಅನ್ನದಾತನ ಕೈಗೆ ನೀಡಿ, ವಾಣಿಜ್ಯ ಬೆಳೆ ಹತ್ತಿ, ಹೆಸರು, ಈರುಳ್ಳಿ, ಜೋಳ, ಕಡಲೆಯ ಇಳುವರಿ ಹೆಚ್ಚಳಕ್ಕೂ ಸಹಕಾರಿಯಾಗಿದೆ.

ಒಟ್ಟಿನಲ್ಲಿ ತೋಟಗಾರಿಕೆ, ವಾಣಿಜ್ಯ ಎಲ್ಲಾ ಬೆಳೆಗೆ ಪೂರಕವಾದ ಕೃಷಿಹೊಂಡ ಅನ್ನದಾತನ ಜಮೀನಿಗೆ ಜಲಧಾರೆ ಹರಿಸಿ ವಾರ್ಷಿಕ 7 ಲಕ್ಷ ವರಮಾನದ ಮುಕುಟ ತೋರಿದೆ‌.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/06/2022 05:01 pm

Cinque Terre

145.83 K

Cinque Terre

2

ಸಂಬಂಧಿತ ಸುದ್ದಿ