ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: 5 ಎಕರೆ ಭೂಮಿಯಲ್ಲಿ 4 ಲಕ್ಷ ಆದಾಯ ಕೃಷಿಹೊಂಡ ಖುಷಿ ಹೊಂಡ

ಅಣ್ಣಿಗೇರಿ: ಕೃಷಿಹೊಂಡ ಆಶ್ರಿತ ಬೇಸಾಯದ ಮೂಲಕ ಇಲ್ಲೋಬ್ಬ ರೈತನ ಬದುಕು ಹಸನಾಗಿ, ವಾರ್ಷಿಕ 5 ಎಕರೆ ಭೂಮಿಯಲ್ಲಿ ಬರೋಬ್ಬರಿ 4 ಲಕ್ಷ ಆದಾಯ ಗಳಿಸಿದ್ದಾರೆ.

ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ರೈತ ನಿಂಗಪ್ಪ ಲಕ್ಷ್ಮಪ್ಪ ಮೇಗುಂಡಿ ತಮ್ಮ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 75/75 ಸುತ್ತಳತೆ ಕೃಷಿಹೊಂಡ ನಿರ್ಮಿಸಿಕೊಂಡು, ಮುಂಗಾರು ಹತ್ತಿ, ಮೆಣಸಿನಕಾಯಿ ಅತಿವೃಷ್ಟಿ ಸುಳಿಗೆ ಹಾನಿಯಾಗಿದರೂ, ನೀರಾವರಿ ಮೂಲಕ ಹೆಸರು ಬೆಳೆ ಬೆಳೆದು ಉತ್ತಮ ಲಾಭ ಪಡೆದು ಪ್ರಸ್ತುತ ಹಿಂಗಾರು ಕಡಲೆ ಬೆಳೆಯ ಆದಾಯದ ನೀರಿಕ್ಷೆ ಹೊಂದಿದ್ದಾರೆ.

ಕಳೆದ ಐದು ವರ್ಷದ ಹಿಂದೆ ಕೃಷಿಹೊಂಡ ನಿರ್ಮಿಸಿಕೊಂಡ ರೈತ ಲಕ್ಷ್ಮಪ್ಪ ಮೇಗುಂಡಿ, ತಾವೂ ನೀರಾವರಿ ಬೇಸಾಯದಲ್ಲಿ ಲಾಭ ಪಡೆದಂತೆ ಇತರ ರೈತರು ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿಹೊಂಡ ನಿರ್ಮಾಣ ಮಾಡಿಕೊಂಡು ಉತ್ತಮ ಬೆಳೆ ಬೆಳೆಯಿರಿ ಎಂದು ಹಾರೈಸುತ್ತಾರೆ‌.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/02/2022 09:19 pm

Cinque Terre

120.63 K

Cinque Terre

0

ಸಂಬಂಧಿತ ಸುದ್ದಿ