ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : 65 ರ ಇಳಿವಯಸ್ಸಲ್ಲೂ ಬೇಸಾಯ 4 ಲಕ್ಷ ಆದಾಯ

ಅಣ್ಣಿಗೇರಿ : ಇಲ್ಲೋಬ್ಬ ರೈತ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿಹೊಂಡ ನಿರ್ಮಾಣ ಮಾಡಿಕೊಂಡು ಕೇವಲ ನಾಲ್ಕು ಎಕರೆ ಜಮೀನಿನಲ್ಲಿ ವಾರ್ಷಿಕ ನಾಲ್ಕು ಲಕ್ಷ ಆದಾಯ ಗಳಿಸಿದ್ದಾರೆ.

ಆರೆ.! ಏನಿದು ಎಕರೆಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಆದಾಯವೇ ಅಂದ್ರಾ ? ಹೌದು ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ರೈತ ಪಕ್ಕಿರಪ್ಪ ಚವಡಿ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ನೂರು ನೂರು ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಮುಂಗಾರು ಮೆಣಸಿನಕಾಯಿ, ಹತ್ತಿ, ಈರುಳ್ಳಿ, ಲಾಭ ಪಡೆದು ಹಿಂಗಾರು ಕಡಲೆ, ಗೋಧಿ ಜೊತೆ ಜೊತೆಗೆ ನೀರಾವರಿ ಶೇಂಗಾ, ನೀರಾವರಿ ಸಂದಕಾ ಗೋಧಿ ಸಹ ಬೆಳೆದು ಉತ್ತಮ ಆದಾಯದ ನಿರೀಕ್ಷೆ ಹೊಂದಿದ್ದಾರೆ.

ರೈತ ಪಕ್ಕಿರಪ್ಪ ತನ್ನ 65ರ ಇಳಿವಯಸ್ಸಿನಲ್ಲೂ ಕೃಷಿ ಕಾಯಕದಲ್ಲಿ ನಿರತರಾಗಿ, ಅದೆಷ್ಟೋ ಯುವಕರಿಗೆ ಕೃಷಿಯಲ್ಲಿ ಹೊಸ ಆದಾಯದ ಬದಲಾವಣೆಯ ಸಲಹೆ ನೀಡುತ್ತ, ಕೃಷಿಹೊಂಡದ ಮೂಲಕ ಎಲ್ಲರಿಗಿಂತ ಒಂದು ಪಟ್ಟು ಹೆಚ್ಚಿನ ವರಮಾನ ಸಹ ಪಡೆದಿದ್ದಾರೆ.

Edited By : Manjunath H D
Kshetra Samachara

Kshetra Samachara

23/02/2022 09:00 pm

Cinque Terre

79.22 K

Cinque Terre

3

ಸಂಬಂಧಿತ ಸುದ್ದಿ