ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಸಣ್ಣ ಸಣ್ಣ ರೈತರಿಗೂ ವರವಾದ ಕೃಷಿಹೊಂಡ ತಂದಿದೆ ನೆಮ್ಮದಿಯ ಬೆಳೆ

ಅಣ್ಣಿಗೇರಿ: ಕೃಷಿ ಕಾಯಕ ಎಂದ್ರೇ ಬಹಳಷ್ಟು ಜಮೀನು ಇರ್ಬೇಕು, ಅದಕ್ಕೆ ತಕ್ಕ ಸಲಕರಣೆ ಇರ್ಬೇಕು, ಅಂದ್ರೇ ಆ ಕೃಷಿಯಿಂದ ಲಾಭ ಎನ್ನುತ್ತಿದ್ದ ಅಲ್ಪ ಸ್ವಲ್ಪ ಜಮೀನು ಹೊಂದಿದ ರೈತರು ಇಂದು ಕೃಷಿಹೊಂಡದ ಬೇಸಾಯದಲ್ಲಿ ಖುಷಿ ಕಂಡಿದ್ದಾರೆ.

ಈ ಮಾತಿಗೆ ಉದಾಹರಣೆ ಎಂಬಂತೆ ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ರೈತ ಮಾರುತಿ ದೇವಪ್ಪ ಚವಡಿ ಕೇವಲ ತನ್ನ ನಾಲ್ಕು ಎಕರೆ ಜಮೀನಿನಲ್ಲೇ ವಿಧ ವಿಧದ ಬೆಳೆ ಬೆಳೆದು, ಕೃಷಿಯಲ್ಲೇ ಬದುಕನ್ನು ಹಸನು ಮಾಡಿಕೊಂಡಿದ್ದಾರೆ.

ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ನೂರು ನೂರು ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಮುಂಗಾರು ಮೆಣಸಿನಕಾಯಿ, ಹೆಸರು, ಶೇಂಗಾ ಬೆಳೆ ತೆಗೆದು ಇದೀಗ ಹಿಂಗಾರು ಕಡಲೆ, ಗೋಧಿ, ಕುಸುಬೆ ಬೆಳೆ ಬೆಳೆದು ಅಲ್ಪ ಜಮೀನಿನಲ್ಲೇ ಉತ್ತಮ ಆದಾಯ ಪಡೆದು ದೇಶಪಾಂಡೆ ಫೌಂಡೇಶನ್ ಸಹಾಯಕ್ಕೆ ಎರೆಡು ಕೈ ಜೋಡಿಸಿ ಧನ್ಯವಾದ ಹೇಳಿದ್ದಾರೆ.

ರೈತ ಮಾರುತಿ ಚವಡಿಯವರ ಜಮೀನಿನ ಫಲವತ್ತತೆ ವೃದ್ಧಿಸಲು ಕೃಷಿಹೊಂಡ ನಿರ್ಮಾಣ ಸಹಕಾರಿಯಾಗಿ ಹೊಂಡದ ಮಣ್ಣು ಬದು ನಿರ್ಮಾಣಕ್ಕೂ ಉಪಯೋಗವಾಗಿದೆ. ಪ್ರಸ್ತುತ ಹಿಂಗಾರು ನೀರಾವರಿ ಸಂದಕಾ ಗೋಧಿ, ಶೇಂಗಾ ಬೆಳೆಯಲು ಸಹ ಕೃಷಿಹೊಂಡದ ಜಲ ಅವಕಾಶ ನೀಡಿದೆ.

ಒಟ್ಟಾರೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಕಾಮಗಾರಿ ನಾಲ್ಕು ಎಕರೆ ಜಮೀನು ಹೊಂದಿರುವ ರೈತ ಮಾರುತಿ ಚವಡಿ ಬಾಳಲ್ಲಿ ವಾರ್ಷಿಕ 3 ಲಕ್ಷ ಆದಾಯದ ಉತ್ತಮ ಬೆಳೆ ನೀಡಿದೆ.

Edited By : Manjunath H D
Kshetra Samachara

Kshetra Samachara

22/02/2022 08:13 pm

Cinque Terre

58.41 K

Cinque Terre

0

ಸಂಬಂಧಿತ ಸುದ್ದಿ