ಅಣ್ಣಿಗೇರಿ : ಆಧುನಿಕತೆ ಎಷ್ಟೇ ಮುಂದುವರಿದರೂ ಈ ರೈತಾಪಿ ಕೃಷಿ ಬದುಕು ತನ್ನ ಹಿರಿಮೆಯನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲಾ ಕೊಡುವುದು ಇಲ್ಲಾ, ಎಂಬ ಮಾತಿಗೆ ದೇಶಪಾಂಡೆ ಫೌಂಡೇಶನ್ ಮತ್ತೊಂದು ಸಹಕಾರ ನೀಡಿ ಅದೆಷ್ಟೋ ರೈತರ ಜಮೀನಿನಲ್ಲಿ ಗಂಗೆಯನ್ನ ಹರಿಸಿದೆ.
ಹೌದು ! ಒಣ ಬೇಸಾಯದ ಮಾರ್ಗದಲ್ಲಿದ್ದ ರೈತರಿಗೆ ಅವರ ಭೂಮಿಯಲ್ಲಿನ ಕೃಷಿ ನೀರನ್ನು ಶೇಖರಿಸಿಡಲು ವರವಾದ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡದ ಮೂಲಕ ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ರೈತ ಅಭಿನಂದನ್ ಜೈನರ್ ಅತ್ಯುತ್ತಮ ಬೆಳೆ ಬೆಳೆದಿದ್ದಾರೆ.
ತಮ್ಮ 21 ಎಕರೆ ಜಮೀನಿನಲ್ಲಿ ನೂರು ನೂರು ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ರೈತ ಅಭಿನಂದನ್, ಮುಂಗಾರು ಈರುಳ್ಳಿ, ಮೆಣಸಿನಕಾಯಿ, ಬೆಳೆ ಬೆಳೆದು ಉತ್ತಮ ಲಾಭ ಪಡೆದು ಇದೀಗ ಹಿಂಗಾರು ಕಡಲೆ, ಗೋಧಿಯ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಇನ್ನೂ ವಿಶೇಷ ಎಂದ್ರೇ ಇದೇ ಕೃಷಿಹೊಂಡ ಆಶ್ರಿತವಾಗಿ ನೀರಾವರಿ ಸಂದಕಾ ಗೋಧಿ ಹಾಗೂ ನೀರಾವರಿ ಶೇಂಗಾ ಸಹ ಬೆಳೆದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ರೈತರ ಮಾತಿನಂತೆ ಒಣ ಬೇಸಾಯ ಹಾಗೂ ಕೃಷಿಹೊಂಡ ಬೇಸಾಯದ ಆದಾಯದ ಲೆಕ್ಕಕ್ಕೆ ಪರಿಗಣಿಸಿದ್ರೇ, ಕೃಷಿಹೊಂಡವೇ ಲೇಸು ದುಪ್ಪಟ್ಟು ಆದಾಯ ಬರುತ್ತೇ ಎನ್ನುತ್ತಾ, ದೇಶಪಾಂಡೆ ಫೌಂಡೇಶನ್ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುತ್ತಾರೆ.
ಒಟ್ಟಾರೆ ದೇಶಪಾಂಡೆ ಫೌಂಡೇಶನ್ ಹಿಂಗಾರು ಅವಧಿಯಲ್ಲೂ ಪರ್ಯಾಯ ಬೆಳೆಗೆ ಅನುಕೂಲವಾಗಿ ವಾರ್ಷಿಕ 5 ಲಕ್ಷ ಆದಾಯದ ಖುಷಿ ರೈತ ಅಭಿಂನದನ್ ಪಾಲಿಗೆ ನೀಡಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/02/2022 09:49 pm