ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: 60 ರ ಇಳಿವಯಸ್ಸಿನಲ್ಲಿ ಕೃಷಿ ಪ್ರೇಮ, ಒಂದು ಕೃಷಿಹೊಂಡ ಹಲವಾರು ಲಾಭ

ಅಣ್ಣಿಗೇರಿ: ಒಣ ಬೇಸಾಯದ ದಾರಿ ಹಿಡಿದು, ದುಡಿದಷ್ಟು ಕೈಗೆ ಬಂದಷ್ಟೂ ಆದಾಯದ ‌ಹೊಂದಿದ್ದ ರೈತರಿಗೆ, ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಯೋಜನೆ ಇದೀಗ ವರವಾಗಿ ಒಂದು ಕೃಷಿಹೊಂಡ ಹಲವಾರು ಲಾಭಕ್ಕೆ ಕಾರಣವಾಗಿದೆ.

ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ನಿಂಗಪ್ಪ ಗಿರಿಯಪ್ಪ ಚವಡಿ ಎಂಬುವವರೇ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣದ ಅನುಕೂಲ ಪಡೆದವರು, ಉತ್ತಮ ಬೆಳೆ ಬೆಳೆದವರು.

ತಮ್ಮ 12 ಎಕರೆ ಜಮೀನಿನಲ್ಲಿ ನೂರು ನೂರು ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ನಿಂಗಪ್ಪ ಚವಡಿ ಮುಂಗಾರು ವಾಣಿಜ್ಯ ಬೆಳೆ ಮೆಣಸಿನಕಾಯಿ, ಹತ್ತಿ ಜೊತೆ, ಹಿಂಗಾರು ನೀರಾವರಿ ಗೋಧಿ, ಜೋಳ ಗೋವಿನಜೋಳ ಬೆಳೆದು ಉತ್ತಮ ಆದಾಯದ ನಿರೀಕ್ಷೆ ಹೊಂದಿದ್ದಾರೆ.

ಇದಲ್ಲದೆ ದೇಶಪಾಂಡೆ ಫೌಂಡೇಶನ್ ಕೃಷಿಹೊಂಡ ನಿರ್ಮಾಣದ ಮಣ್ಣು, ಹೊಲದ ಸವಕಳಿ ತಡೆಗೆ ಹಾಗೂ ಬದು ನಿರ್ಮಾಣಕ್ಕೂ ಸಹ ಸಹಕಾರಿಯಾಗಿ ಭೂಮಿಯ ಪೈರಿಗೆ ವರವಾಗಿದೆ.

ಇನ್ನೂ ತಮ್ಮ 60 ರ ಇಳಿವಯಸ್ಸಿನಲ್ಲೂ ಹೊಸ ಹೊಸ ಆವಿಷ್ಕಾರದ ಕೃಷಿಗೆ ಮುಖ ಮಾಡಿ ರೈತ ನಿಂಗಪ್ಪ ಒಣ ಬೇಸಾಯದ ಆದಾಯಕ್ಕಿಂತ ದುಪ್ಪಟ್ಟು ಲಾಭವನ್ನು ಈ ಕೃಷಿಹೊಂಡ ಆಶ್ರಿತ ಬೇಸಾಯ ತಂದುಕೊಟ್ಟಿದೆ.

ಒಟ್ಟಾರೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿಂಗಪ್ಪನಂತಹ ಅದೆಷ್ಟೋ ಪ್ರಗತಿಪರ ರೈತರ ಬಾಳಲ್ಲಿ ಹಸಿರುಕ್ರಾಂತಿ ಮಾಡಿದೆ.

Edited By : Manjunath H D
Kshetra Samachara

Kshetra Samachara

17/02/2022 06:25 pm

Cinque Terre

64.87 K

Cinque Terre

0

ಸಂಬಂಧಿತ ಸುದ್ದಿ